Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಮಾನ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ವಿನಾಯಕ ಶುಕ್ಲಾ ನೇಮಕ!

Spread the love

ಲಕ್ಕೊ: ಕಾನ್ಸುರದಲ್ಲಿ ಜನಿಸಿರುವ ವಿಕೆಟ್‌ಕೀಪರ್-ಬ್ಯಾಟರ್ ವಿನಾಯಕ ಶುಕ್ಲಾ ಅವರು ಒಮಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ.
ಎಸಿಸಿ ಪುರುಷರ ಪ್ರೀಮಿಯರ್ ಕಪ್ ಹಾಗೂ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್-2ರ ಅಭಿಯಾನದ ಕೊನೆಯ ಹಂತಕ್ಕಿಂತ ಮೊದಲು ದೀರ್ಘಕಾಲ ನಾಯಕನಾಗಿದ್ದ ಜತಿಂದರ್ ಸಿಂಗ್ ಉತ್ತರಾಧಿಕಾರಿಯಾಗಿ ವಿನಾಯಕ ನೇಮಕಗೊಂಡಿದ್ದಾರೆ.
31ರ ವಯಸ್ಸಿನ ವಿನಾಯಕ, 2024ರಲ್ಲಿ ಖತರ್ ವಿರುದ್ಧ ತನ್ನ ಚೊಚ್ಚಲ ಟಿ-20 ಪಂದ್ಯ ಆಡಿದ್ದರು. 18 ಎಸೆತಗಳಲ್ಲಿ 40 ರನ್ ಗಳಿಸಿ ಒಮಾನ್ ತಂಡವು 200ಕ್ಕೂ ಅಧಿಕ ರನ್ ಗಳಿಸುವಲ್ಲಿ ನೆರವಾಗಿದ್ದರು. ಆರು ದಿನಗಳ ನಂತರ ಅದೇ ಟೂರ್ನಿಯಲ್ಲಿ ಕುವೈತ್ ವಿರುದ್ಧ 29 ಎಸೆತಗಳಲ್ಲಿ ತನ್ನ ಚೊಚ್ಚಲ ಅರ್ಧಶತಕ(ಔಟಾಗದೆ 52)ಗಳಿಸಿದ್ದರು.
ವಿನಾಯಕ 14 ಏಕದಿನ ಪಂದ್ಯಗಳಲ್ಲಿ 312 ರನ್ ಹಾಗೂ 22 ಟಿ-20 ಪಂದ್ಯಗಳಲ್ಲಿ 447 ರನ್ ಗಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *