Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಠಾತ್ ಪ್ರವಾಹಕ್ಕೆ ಬಲಿಯಾದ ಭಾರತೀಯ ಮೂಲದ ಟೆಕ್ಕಿ!

Spread the love

ವಾಷಿಂಗ್ಟನ್ : ಅಮೆರಿಕದ ಕಾನ್ಸಾಸ್ ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕಾರೊಂದು ಕೊಚ್ಚಿ ಹೋಗಿ 33 ವರ್ಷದ ಭಾರತೀಯ ಮೂಲದ ಟೆಕ್ಕಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಮೂಲದ ವೆಂಕಟೇಶ್ ಡೊಪ್ಪಲಪುಡಿ ಮೃತರು. ಇವರು H-1B ವೀಸಾ ಹೊಂದಿದ್ದು, ನೆಬ್ರಾಸ್ಕಾದ ಒಮಾಹಾದಲ್ಲಿ ವಾಸಿಸುತ್ತಿದ್ದರು.
ಶನಿವಾರ ಮಧ್ಯಾಹ್ನ ಹೂಸ್ಟನ್‌ನಿಂದ ಹಿಂದಿರುಗುತ್ತಿದ್ದ ವೇಳೆ ವೆಂಕಟೇಶ್ ಅವರ ಕಾರು ಕಾನ್ಸಾಸ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಆರಂಭದಲ್ಲಿ, ಪ್ರವಾಹದಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಬಳಿಕ ಡೋನ್‌ಗಳು ಸೇರಿದಂತೆ ವ್ಯಾಪಕವಾದ ಹುಡುಕಾಟದ ಬಳಿಕ ದೊಪ್ಪಲಪುಡಿ ಅವರ ಮೃತದೇಹ ಪತ್ತೆಯಾಗಿದೆ.
ಘಟನೆ ಕುರಿತು ಭಾರತೀಯ ದೂತವಾಸ ಸಂತಾಪವನ್ನು ಸೂಚಿಸಿದೆ. ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *