Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಶ್ಯ-ಉಕ್ರೇನ್ ಸಂಘರ್ಷ: ಭೀಕರ ಕ್ಷಿಪಣಿ ದಾಳಿಗೆ ಉಕ್ರೇನ್ ತತ್ತರ; 7 ಮಂದಿ ಸಾ*ವು!

Spread the love

ಕೀವ್: ಸೋಮವಾರ ರಶ್ಯ ನಡೆಸಿದ ಕ್ಷಿಪಣಿ ಮತ್ತು ಡೋನ್ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಉಕ್ರೇನ್‌ನ ಡಿಪ್ರೊ ನಗರದ ಖಾಸಗಿ ಉದ್ಯಮದ ಮೇಲೆ ರಶ್ಯ ಕ್ಷಿಪಣಿ ದಾಳಿ ನಡೆಸಿದಾಗ ಐದು ಜನರು ಸಾವನ್ನಪ್ಪಿದ್ದಾರೆ. ದಕ್ಷಿಣದ ನಗರವಾದ ಜಪೋರಿಝಿಯಾದಲ್ಲಿ ಸಿಟಿ ಬಸ್‌ನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಡಿಪ್ರೊ ನಗರದಲ್ಲಿ 28 ಜನರು ಗಾಯಗೊಂಡಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಹೊಡೆದುರುಳಿಸಲಾದ ಉಕ್ರೇನಿಯನ್ ಡೋನ್‌ಗಳ ಅವಶೇಷಗಳಿಂದ ರಶ್ಯದ ಕ್ರಾಸ್ಕೋಡರ್ ಪ್ರದೇಶದಲ್ಲಿರುವ ಸ್ಲಾವಿಯಾನ್ಸ್-ನಾ-ಕುಬಾನಿ ಪಟ್ಟಣದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡೋನ್‌ಗಳ ಅವಶೇಷಗಳು ಬಿದ್ದಿದ್ದರಿಂದ ಸ್ಲಾವಿಯಾನ್ಸ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹತ್ತಿರದ ಹಳ್ಳಿಯೊಂದರಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಈ ತೈಲ ಸಂಸ್ಕರಣಾಗಾರವು ದಕ್ಷಿಣ ರಶ್ಯದ ಪ್ರಮುಖ ಸಂಸ್ಕರಣಾಗಾರಗಳಲ್ಲಿ ಒಂದಾಗಿದ್ದು, ವರ್ಷಕ್ಕೆ ಸುಮಾರು 40 ಲಕ್ಷ ಟನ್‌ ಕಚ್ಚಾ ತೈಲವನ್ನು ಸಂಸ್ಕರಿಸುತ್ತದೆ. ಅಲ್ಲದೆ, ರಶ್ಯದ ಕಪ್ಪು ಸಮುದ್ರದ ಬಂದರುಗಳ ಮೂಲಕ ರಫ್ತು ಮಾಡಲು ಉದ್ದೇಶಿಸಲಾದ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ಮೂಲಗಳಲ್ಲಿ ಇದೂ ಒಂದಾಗಿದೆ.


Spread the love
Share:

administrator

Leave a Reply

Your email address will not be published. Required fields are marked *