Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನ ಸೇನಾ ಕಾರ್ಯಾಚರಣೆ: ಗಡಿಯಾಚೆಗಿನ ದಾಳಿಯಲ್ಲಿ 29 ಉಗ್ರರ ಹ*ತ್ಯೆ

Spread the love

ಇಸ್ಲಾಮಾಬಾದ್: ಕರಾಚಿಯಲ್ಲಿರುವ ಅರೆಸೈನಿಕ ರೇಂಜರ್ಸ್‌ನ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಪಾಕಿಸ್ತಾನದ ಭದ್ರತಾ ಪಡೆಗಳು ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 29 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ತಾನ ಸರಕಾರ ತಿಳಿಸಿದೆ.
ಪಾಕಿಸ್ತಾನದ ಮಾಹಿತಿ ಸಚಿವ ಅಲ್ಲಾ ತರಾರ್ ಅವರ ಪ್ರಕಾರ, ಮೊದಲು ಖೈಬರ್ ಪಸ್ತುಂಖ್ಯಾದ ಬಚೌರ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಭೂ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಉನ್ನತ ಮಟ್ಟದ ಕಮಾಂಡರ್ ಖಾನ್ ಫರೋಶ್ ಸೇರಿದಂತೆ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಇದರ ಬಳಿಕ ಅಫ್ಘಾನಿಸ್ತಾನದ ಪಕ್ತಿಯಾ, ಪಕ್ತಿಕಾ ಮತ್ತು ಕುನಾರ್ ಪ್ರಾಂತ್ಯಗಳಲ್ಲಿರುವ ಜಮಾತ್-ಉಲ್-ಅಹ್ರಾರ್ ಹಾಗೂ ಪಾಕಿಸ್ತಾನಿ ತಾಲಿಬಾನ್ ಅಡಗುತಾಣಗಳು ಮತ್ತು ತರಬೇತಿ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ 25 ಭಯೋತ್ಪಾದಕರ ಹತ್ಯೆ ನಡೆದಿದೆ ಎಂದು ತಿಳಿಸಿದ್ದಾರೆ.
ಶನಿವಾರ ಕರಾಚಿಯಲ್ಲಿರುವ ರೇಂಜರ್ಸ್‌ನ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ ಮೂವರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ ಭದ್ರತಾ ಪಡೆಗಳು ಮೂವರು ದಾಳಿಕೋರರನ್ನು ಹೊಡೆದುರುಳಿಸಿದ್ದು, ಗಾಯಗೊಂಡಿದ್ದ ಮತ್ತೊಬ್ಬನನ್ನು ಬಂಧಿಸಿವೆ. ಬಂಧಿತನನ್ನು ಅಫ್ಘಾನಿಸ್ತಾನದ ಪ್ರಜೆ ಎಂದು ಪಾಕಿಸ್ತಾನ ಸೇನೆ ಗುರುತಿಸಿದೆ. ಜಮಾತ್-ಉಲ್-ಅಹ್ರಾರ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

“ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಬದ್ಧವಾಗಿದೆ. ಆದರೆ ದೇಶದ ನಾಗರಿಕರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಅಲ್ಲಾ ತರಾರ್ ಹೇಳಿದ್ದಾರೆ.
ಪಾಕಿಸ್ತಾನ ಕಳೆದ ಒಂದು ವರ್ಷದಿಂದ ಗಡಿಯಾಚೆ ಮತ್ತು ಅಫ್ಘಾನಿಸ್ತಾನದೊಳಗೆ ಹಲವಾರು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಪಾಕಿಸ್ತಾನದೊಳಗಿನ ಭಯೋತ್ಪಾದನಾ ದಾಳಿಗಳಿಗೆ ಕಾರಣವಾಗಿರುವ ಸಂಘಟನೆಗಳಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ. ಆದರೆ, ಕಾಬೂಲ್ ಸರಕಾರ ಈ ಆರೋಪಗಳನ್ನು ನಿರಾಕರಿಸಿದೆ.


Spread the love
Share:

administrator

Leave a Reply

Your email address will not be published. Required fields are marked *