Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೋಸ್ಟನ್: ಇಸ್ಮಾಯಿಲ್ ಸೈಬಾರಿ ಮ್ಯಾಜಿಕ್; ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದಲ್ಲಿ ಮೊರಾಕ್ಕೊ ಭರ್ಜರಿ ಜಯ!

Spread the love

ಬೋಸ್ಟನ್ : ಪಂದ್ಯದ ಆರಂಭದಲ್ಲೇ ಇಸ್ಮಾಯಿಲ್ ಸೈಬಾರಿ ಗಳಿಸಿದ ಗೋಲು ನೆರವಿನಿಂದ ಮೊರಾಕ್ಕೊ ತಂಡವು ಸ್ಕಾಟ್ಲಾಂಡ್ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದೆ. ಇದರಿಂದ ಸ್ಕಾಟ್ಲಾಂಡ್ ಮುಂದಿನ ಹಂತಕ್ಕೆ ಪ್ರವೇಶಿಸಲು ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಪಂದ್ಯ ಆರಂಭವಾಗಿ ಕೇವಲ ಎರಡೇ ನಿಮಿಷದಲ್ಲಿ ಇಸ್ಮಾಯಿಲ್ ಸೈಬರಿ ಸುಲಭ ಗೋಲು ಗಳಿಸಿ ಮೊರಾಕೊ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ ಒತ್ತಡಕ್ಕೊಳಗಾದ ಸ್ಕಾಟ್ನಾಂಡ್ ಪಂದ್ಯದಲ್ಲಿ ತನ್ನ ಮೊದಲ ಗೋಲು ಪ್ರಯತ್ನಕ್ಕೆ ಬರೋಬ್ಬರಿ 46 ನಿಮಿಷಗಳನ್ನು ತೆಗೆದುಕೊಂಡಿತು.
ಸ್ಕಾಟ್ಲಾಂಡ್ ಆಟಗಾರರು ತಮ್ಮ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದಾಗ, ಸೈಬಾರಿ ಅವರು ಎರಡನೇ ಗೋಲು ಗಳಿಸುವ ಸನಿಹಕ್ಕೂ ಬಂದಿದ್ದರು. ಆದರೆ ಅದು ಗೋಲಾಗಿ ಬದಲಾಗಲಿಲ್ಲ.
ಪಂದ್ಯದಲ್ಲಿ ಮೊರಾಕ್ಕೊ ತಂಡವು 2 ನೇರ ಗುರಿಯೊಂದಿಗೆ 12 ಬಾರಿ ಗೋಲು ಪ್ರಯತ್ನ ನಡೆಸಿದರೆ, ಸ್ಕಾಟ್ನಾಂಡ್ ಯಾವುದೇ ನೇರ ಗುರಿಯಿಲ್ಲದೆ 6 ಬಾರಿ ಗೋಲು ಪ್ರಯತ್ನ ನಡೆಸಿತು.
ಈ ಗೆಲುವಿನೊಂದಿಗೆ ಮೊರಾಕ್ಕೊ ತಂಡವು ಸಿ ಗುಂಪಿನಲ್ಲಿ 2ನೇ ಸ್ಥಾನಕ್ಕೆ ತಲುಪಿದೆ.


Spread the love
Share:

administrator

Leave a Reply

Your email address will not be published. Required fields are marked *