Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಮಾನ್ ಕರಾವಳಿ: ಅಮೆರಿಕ ಸೇನೆ ದಾಳಿಗೆ ತೈಲ ಟ್ಯಾಂಕರ್‌ನಲ್ಲಿದ್ದ ಇಬ್ಬರು ಭಾರತೀಯರು ಬಲಿ; ಒಬ್ರು ನಾಪತ್ತೆ!

Spread the love

ಹೊಸದಿಲ್ಲಿ: ಒಮಾನ್ ಕರಾವಳಿಯ ಸಮೀಪ ಮಂಗಳವಾರ ರಾತ್ರಿ ಸೆಟ್ಟೆಬೆಲ್ಲೊ ತೈಲ ಟ್ಯಾಂಕರ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು the hindu ವರದಿ ಮಾಡಿದೆ.
ಫಾರ್ವಡ್್ರ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ನೀಡಿದ ಮಾಹಿತಿಯ ಪ್ರಕಾರ, ಮೃತಪಟ್ಟವರನ್ನು ಡೆಕ್ ಕೆಡೆಟ್ ಆದಿತ್ಯ ಶರ್ಮಾ ಮತ್ತು ಇಂಜಿನ್ ಫಿಟ್ಟರ್ ಶಿವಾನಂದ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಮುಖ್ಯ ಇಂಜಿನಿಯರ್ ಪಟ್ನಾಲ ಸುರೇಶ್ ಅವರ ಸುಳಿವು ಇನ್ನೂ ಲಭ್ಯವಾಗಿಲ್ಲ.

ಈ ಘಟನೆಯ ಬಳಿಕ ಭಾರತ ಸರಕಾರ ಬುಧವಾರ ಅಮೆರಿಕದ ಉಪ ಮಿಷನ್ ಮುಖ್ಯಸ್ಥ ಜೇಸನ್ ಮೀಕ್ಸ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಮಂಗಳವಾರ ಸಂಜೆ ಒಮಾನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಸೆಟ್ಟೆಬೆಲ್ಲೊ ಟ್ಯಾಂಕರ್ ಮೇಲೆ ‘ನಿಖರ ದಾಳಿ’ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹೇಳಿದೆ. ಹಡಗು ಇರಾನ್ ನ ತೈಲವನ್ನು ಸಾಗಿಸುತ್ತಿತ್ತು. ಹಡಗಿನ ಸಿಬ್ಬಂದಿ ಅಮೆರಿಕದ ಪಡೆಗಳ ಸೂಚನೆಗಳನ್ನು ಪಾಲಿಸಿರಲಿಲ್ಲ. ಇದರಿಂದ ಟ್ಯಾಂಕರ್ ಮೇಲೆ ನಿಖರ ದಾಳಿ ನಡೆಸಲಾಯಿತು ಎಂದು CENTCOM ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *