Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಭೀಕರ ಗ್ಯಾಸ್ ಸ್ಫೋಟ; 90 ಕಾರ್ಮಿಕರ ಸಾವು, 9 ಮಂದಿ ನಾಪತ್ತೆ!

Spread the love

ಬೀಜಿಂಗ್: ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 90 ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ 17 ವರ್ಷಗಳಲ್ಲಿ ಚೀನಾದಲ್ಲಿ ನಡೆದ ಅತಿದೊಡ್ಡ ಗಣಿಗಾರಿಕೆ ದುರಂತವಾಗಿದೆ ಎಂದು ವರದಿಯಾಗಿದೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ರಾತ್ರಿ 7.29ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಗ್ಯಾಸ್ ಸ್ಫೋಟದ ವೇಳೆ ಸ್ಥಳದಲ್ಲಿ ಒಟ್ಟು 247 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಬಹುತೇಕ ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಚೀನಾದ Xinhua ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರದ ಸಂಭವಿಸಿದ ಸ್ಫೋಟವು 2009ರ ನಂತರ ಚೀನಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ಗಣಿಗಾರಿಕೆ ದುರಂತವಾಗಿದೆ. 2009ರಲ್ಲಿ ಈಶಾನ್ಯ ಹೈಲಾಂಗ್ವಿಯಾಂಗ್ ಪ್ರಾಂತ್ಯದಲ್ಲಿ ಗಣಿ ಸ್ಫೋಟದಲ್ಲಿ 108 ಜನರು ಮೃತಪಟ್ಟಿದ್ದರು.


Spread the love
Share:

administrator

Leave a Reply

Your email address will not be published. Required fields are marked *