ಹೊಸದಿಲ್ಲಿ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪೈ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್; ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದ ನಾಯಕ

ಹೊಸದಿಲ್ಲಿ: ದೇಶದಲ್ಲಿ ಸಂಚಲನವನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪೈ ತನ್ನ ವೈಯಕ್ತಿಕ ಇನ್ನಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ವೈಯಕ್ತಿಕ ಇನ್ನಾಗ್ರಾಮ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಭಿಜಿತ್ ದೀಪೈ ಹೇಳಿದ್ದಾರೆ. ಪಕ್ಷದ ಇನ್ನಾಗ್ರಾಮ್ ಖಾತೆಯನ್ನೂ ಕೂಡ ನಿರ್ಬಂಧಿಸಲಾಗಿತ್ತು. ಆದರೆ ಕೆಲವೇ ಗಂಟೆಗಳ ಬಳಿಕ ಆ ಖಾತೆಯನ್ನು ಮತ್ತೆ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ದೀಪೆ ಹಂಚಿಕೊಂಡಿರುವ ಸ್ಟೀನ್ಶಾಟ್ಗಳ ಪ್ರಕಾರ, ಮೆಟಾ ಸಂಸ್ಥೆಯ ಖಾತೆ ಮರುಪಡೆಯುವ ಪ್ರಕ್ರಿಯೆಯ ಮೂಲಕ ಅವರು ತಮ್ಮ ವೈಯಕ್ತಿಕ ಇನ್ಸಾಗ್ರಾಮ್ ಖಾತೆಯನ್ನು ಮರಳಿ ಪಡೆಯಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನಾಗ್ರಾಮ್ ಖಾತೆಯ recover it now ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಸುರಕ್ಷತೆಗಾಗಿ ನಾವು ನಿಮ್ಮ ಇನ್ನಾಗ್ರಾಮ್ ಖಾತೆಯನ್ನು ಲಾಕ್ ಮಾಡಿದ್ದೇವೆ. ನಿಮ್ಮ ಖಾತೆಯನ್ನು ಮರುಪಡೆಯಲು, ನೀವು ನಿಮ್ಮ ಗುರುತನ್ನು ಪರಿಶೀಲಿಸಬೇಕು ಮತ್ತು ಹೊಸ ಪಾಸ್ವರ್ಡ್ ಅನ್ನು ರಚಿಸಬೇಕು ಎಂಬ ಸಂದೇಶ ಕಂಡು ಬಂದಿದೆ ಎಂದು ಹೇಳಿದ್ದಾರೆ.
“ನಾನು ಪ್ರಸ್ತುತ ಯಾವುದೇ ಖಾತೆಗೆ ಪ್ರವೇಶವನ್ನು ಹೊಂದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಇದರ ನಂತರ ಮಾಡಿದ ಯಾವುದೇ ಪೋಸ್ಟ್ ಅನ್ನು ಜಿರಳೆ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬಾರದು” ಎಂದು ದೀಪೈ ಎಕ್ಸ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿ ಭಾರತದಲ್ಲಿ ಸಿಜೆಪಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಇದರ ನಂತರ ‘ಕಾಕ್ರೋಚ್ ಈಸ್ ಬ್ಯಾಕ್ ಎಂಬ ಹೊಸ ಖಾತೆಯನ್ನು ರಚಿಸಲಾಗಿತ್ತು.