2013ರ ಪ್ರತಿಭಟನೆ ಗಲಾಟೆ ಪ್ರಕರಣ: ಮಮತಾ ಬ್ಯಾನರ್ಜಿಗೆ ದೆಹಲಿ ಪೊಲೀಸರ ನೋಟಿಸ್!

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ದೆಹಲಿ ಪೊಲೀಸರು (Delhi Police) 13 ವರ್ಷಗಳ ಹಳೆಯ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ.

ಈ ಕೇಸ್‌ನಲ್ಲಿ ಮಮತಾ ಬ್ಯಾನರ್ಜಿ ಅವರೇನು ಕ್ರಿಮಿನಲ್ ಅಥವಾ ಆರೋಪಿ ಅಲ್ಲ. ಕೇವಲ ಸಾಕ್ಷಿಯಾಗಿ ಹೇಳಿಕೆ ದಾಖಲಿಸಲು ಪೊಲೀಸರು ಈ ನೋಟಿಸ್ ನೀಡಿದ್ದಾರೆ.
2013 ರಲ್ಲಿ ಏಪ್ರಿಲ್ 9 ರಂದು ದೆಹಲಿಯಲ್ಲಿ ಟಿಎಂಸಿ (TMC) ಪಾರ್ಟಿಯಿಂದ ಒಂದು ದೊಡ್ಡ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆ ಗಲಾಟೆಗೆ ತಿರುಗಿತ್ತು. ಆ ಸಮಯದಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಮಿನಿಸ್ಟರ್ ಆಗಿದ್ದ ಅಮಿತ್ ಮಿತ್ರಾ ಅವರ ಮೇಲೆ ಎಸ್‌ಎಫ್‌ಐ (SFI) ಕಾರ್ಯಕರ್ತರು ದಾಳಿ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಗಲಾಟೆ ಜೋರಾದಾಗ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಪೊಲೀಸರ ನಡುವೆ ದೊಡ್ಡ ವಾಗ್ವಾದ ಮತ್ತು ಜಗಳ ನಡೆದಿತ್ತು. ಈ ಬಗ್ಗೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನ್‌ನಲ್ಲಿ ಕೇಸ್ ಫೈಲ್ ಆಗಿತ್ತು.ಈಗ ಇದೇ ಹಳೇ ಕೇಸ್‌ನ ತನಿಖೆ ನಡೆಸಲು ತರಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಘಟನೆ ನಡೆದಾಗ ಮಮತಾ ಬ್ಯಾನರ್ಜಿ ಅವರು ಅಲ್ಲಿಯೇ ಇದ್ದಿದ್ದರಿಂದ, ಸಾಕ್ಷಿಯಾಗಿ ಅವರ ಸ್ಟೇಟ್‌ಮೆಂಟ್ ರೆಕಾರ್ಡ್ ಮಾಡಿಕೊಳ್ಳಲು ಪೊಲೀಸರು ನೋಟಿಸ್ ಕೊಟ್ಟಿದ್ದಾರೆ