Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

5 ದಶಕಗಳ ಇತಿಹಾಸ ಹಾಗೂ ‘ಫಸ್ಟ್‌ ಡೇ ಶೋ’ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ‘ಊರ್ವಶಿ’ ಥಿಯೇಟರ್‌ ಕಣ್ಮರೆ

Spread the love

ಬೆಂಗಳೂರು: ಕಳೆದ ಐದು ದಶಕ ಸಿನಿಮಾ ಹಬ್ಬಕ್ಕೆ ವೇದಿಕೆಯಾಗಿದ್ದ ‘ಊರ್ವಶಿ’ ಚಿತ್ರಮಂದಿರ ಇನ್ನು ಕೆಲ ದಿನಗಳಲ್ಲೇ ಇತಿಹಾಸದ ಪುಟ ಸೇರಲಿದೆ.ಲೇಖನವು ಕೆಳಗೆ ಮುಂದುವರಿಯುತ್ತದೆ. Go Ad Lite
ಅದೆಷ್ಟೋ ‘ಫಸ್ಟ್‌ ಡೇ ಫಸ್ಟ್ ಶೋ’ ಸಂಭ್ರಮವನ್ನು, ಹತ್ತಾರು ತಾರಾನಟರ ಬೃಹತ್ ಕಟೌಟ್‌ಗಳನ್ನು, ಶಿಳ್ಳೆ-ಚಪ್ಪಾಳೆಯಿಂದ ಕೂಡಿದ ಅಭಿಮಾನಿಗಳ ಸಡಗರವನ್ನು ಈ ಚಿತ್ರಮಂದಿರ ಹಾಗೂ ಅದರ ಆವರಣ ತನ್ನೊಳಗಿರಿಸಿಕೊಂಡಿದೆ. ಲಾಲ್‌ಬಾಗ್ ರಸ್ತೆ-ಸಿದ್ದಯ್ಯ ರಸ್ತೆ ಕೂಡುವಲ್ಲಿ ಇರುವ ‘ಊರ್ವಶಿ’ ಚಿತ್ರಮಂದಿರ ನೆಲಸಮಗೊಳ್ಳಲಿದೆ ಎಂಬ ಸುದ್ದಿ ವರ್ಷದ ಹಿಂದೆಯೇ ಇತ್ತು. ಸೋಮವಾರ (ಆ.24) ಪೊಲೀಸ್ ಬಂದೋಬಸ್ತ್ನಲ್ಲಿ ಈ ಕೆಲಸ ಆರಂಭ ಗೊಂಡಿದೆ.
ಆರಂಭಿಕ ಹಂತದಲ್ಲಿ ಚಿತ್ರಮಂದಿರದ ಒಳಗಿರುವ ಕುರ್ಚಿ ಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಮೂಲಕ ಬೆಂಗಳೂರಿನ ಮತ್ತೊಂದು ಪ್ರಸಿದ್ದ ಏಕಪರದೆ ಚಿತ್ರಮಂದಿರ ಮರೆಯಾಗಲಿದೆ.
ಖ್ಯಾತ ನಟರ ಸಿನಿಮಾಗಳ ಕೊರತೆ, ಹೆಚ್ಚುತ್ತಿರುವ ಮಲ್ಟಿಪ್ಲೆಕ್ಸ್‌ಗಳ ಕಾರಣದಿಂದ ನಗರದಲ್ಲಿ ಇತ್ತೀಚೆಗೆ ಹಲವು ಏಕಪರದೆ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಿವೆ. ಇಲ್ಲಿನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ‘ಕಾವೇರಿ’ಯನ್ನು 2024ರ ಮೇ ತಿಂಗಳಲ್ಲಿ ಕೆಡವಿ ಹಾಕಲಾಗಿತ್ತು. ‘ಊರ್ವಶಿ’ ಚಿತ್ರಮಂದಿರವು ನೆಲಸಮ ಆಗುತ್ತಿರುವುದಕ್ಕೆ ಜಾಗದ ಭೋಗ್ಯದ ಅವಧಿ ಮುಕ್ತಾಯವೇ ಕಾರಣವಾಗಿದೆ. ಶ್ರೀನಿವಾಸ ಎಂಟರ್‌ಪ್ರೈಸಸ್ 1970ರಲ್ಲಿ ಬಿ.ಕೆ.ಗೋವಿಂದರಾಜ್ ಮತ್ತು ಕುಟುಂಬದವರಿಂದ ಚಿತ್ರಮಂದಿರವಿದ್ದ ಜಾಗವನ್ನು 45 ವರ್ಷಕ್ಕೆ ಭೋಗ್ಯಕ್ಕೆ ಪಡೆದಿತ್ತು. 2018ರ ಏಪ್ರಿಲ್‌ಗೆ ಭೋಗ್ಯದ ಅವಧಿ ಕೊನೆಗೊಂಡಿತ್ತು. ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗೆ 2026ರ
ಫೆ.15ರೊಳಗೆ ಜಾಗ ಬಿಟ್ಟುಕೊಡಲು ಹೈಕೋರ್ಟ್ ಆದೇಶಿ ಸಿತ್ತು. ನಂತರ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು.ಈ ನಡುವೆಯೂ ಚಿತ್ರಮಂದಿರ ದಲ್ಲಿ ಚಿತ್ರಗಳ ಪ್ರದರ್ಶನ ಮುಂದುವರಿದಿತ್ತು. 2026ರ ಆರಂಭದಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಪ್ರದರ್ಶನಗಳ ಬಳಿಕ ಕೆಲ ತಿಂಗಳು ಇಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು. ಆದರೆ ಮಾರ್ಚ್‌ನಲ್ಲಿ ‘ಧುರಂಧರ್: ದಿ ರಿವೇಂಜ್’ ಸಿನಿಮಾ ತೆರೆಕಂಡಾಗ ಪ್ರದರ್ಶನ ಪುನರಾರಂಭಿಸ ಲಾಗಿತ್ತು. ಭಾನುವಾರದವರೆಗೆ ಮಲಯಾಳದ ‘ಬೆಣ್ಣೆಹೆಮ್ ಕುಡುಂಬ ಯೂನಿಟ್’ ಸಿನಿಮಾದ ಪ್ರದರ್ಶನವಿತ್ತು.ಅತ್ಯಾಧುನಿಕ ತಂತ್ರಜ್ಞಾನ
ವರನಟ ರಾಜ್‌ಕುಮಾ‌ರ್ ಅವರು ಉದ್ಘಾಟಿಸಿದ್ದ ಈ ಚಿತ್ರಮಂದಿರವು 1100 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ ಕನ್ನಡ ತಮಿಳು ತೆಲುಗು ಸಿನಿಮಾಗಳಷ್ಟೇ ಅಲ್ಲದೆ ಹಾಲಿವುಡ್ ಸಿನಿಮಾಗಳೂ ಇಲ್ಲಿ ತೆರೆಕಾಣುತ್ತಿದ್ದವು. ಇದಕ್ಕೆ ಬೇಕಾದ 4ಕೆ ಡಿಜಿಟಲ್ ಪ್ರೊಜೆಕ್ಟರ್ ಮೀಯರ್ ಸೌಂಡ್ ತಂತ್ರಜ್ಞಾನವೂ ಈ ಚಿತ್ರಮಂದಿರದಲ್ಲಿತ್ತು. “ಅವತಾರ್’ ಸಿನಿಮಾ ಸೇರಿದಂತೆ 3ಡಿ ಸಿನಿಮಾಗಳೂ ಇಲ್ಲಿ ತೆರೆಕಂಡಿವೆ. ಮಲ್ಟಿಪ್ಲೆಕ್ಸ್‌ಗಳ ದರಕ್ಕಿಂತ ಕಡಿಮೆ ದರದಲ್ಲಿ ಇಂತಹ ಚಿತ್ರಗಳು ಈ ಚಿತ್ರಮಂದಿರದ ಮೂಲಕ ಪ್ರೇಕ್ಷಕರನ್ನು ತಲುಪಿವೆ. ತಾರಾನಟರ ಸಿನಿಮಾ ಬಿಡುಗಡೆಯ ನೆಚ್ಚಿನ ತಾಣ ಎಂದೇ ಖ್ಯಾತಿ ಪಡೆದಿದ್ದ ‘ಊರ್ವಶಿ’ಯಲ್ಲಿ ತಮಿಳು ಸ್ಟಾರ್‌ಗಳ ಸಿನಿಮಾ ಬಿಡುಗಡೆ ಎಂದರೆ ಹಬ್ಬದ ವಾತಾವರಣ ಕಂಡುಬರುತ್ತಿತ್ತು. ಚಿತ್ರಮಂದಿರವೇ ಕಾಣದಂತೆ ಸುತ್ತಲೂ ಕಟೌಟ್‌ಗಳ ಗೋಡೆಯೇ ನಿರ್ಮಾಣವಾಗುತ್ತಿತ್ತು. ‘ಅಮೆರಿಕಾ! ಅಮೆರಿಕಾ!!’ ‘ಎಕೆ 47’ ‘ಶಿವಾಜಿ’ ‘ಇಂಡಿಯನ್’ ‘ಬಾಹುಬಲಿ’ ‘ಕೆಜಿಎಫ್’ ‘ಕಾಂತಾರ’ದಂತಹ ಹಿಟ್ ಸಿನಿಮಾಗಳು ಸೇರಿದಂತೆ ಐದು ಸಾವಿರಕ್ಕೂ ಅಧಿಕ ಸಿನಿಮಾಗಳು ಇಲ್ಲಿ ಪ್ರದರ್ಶನಗೊಂಡಿವೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಯನ್ನು ‘ಊರ್ವಶಿ’ಯಲ್ಲಿ ಅದ್ದೂರಿ ಯಾಗಿ ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದರು.


Spread the love
Share:

administrator

Leave a Reply

Your email address will not be published. Required fields are marked *