ತುಮಕೂರು: ಓವರ್‌ಟೇಕ್ ಭರದಲ್ಲಿ ಎರಡು ಕಾರುಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ನಾಲ್ವರು ಸಾ*ವು!

ತುಮಕೂರು: ಓವರ್‌ಟೇಕ್ ಮಾಡುವಾಗ ಎರಡು ಕಾರುಗಳ (Car Accident) ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ಗೋಡೆಕೆರೆ ಗೇಟ್ ಬಳಿ ನಡೆದಿದೆ.

ವೋಕ್ಸವೇಗನ್ ಹಾಗೂ ಕಿಯಾ ಸಾನೆಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಎರಡೂ ಕಾರಿನಲ್ಲಿದ್ದ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ತುರುವೇಕೆರೆ ಮೂಲದ ಆನಂ (3), ದಾವುದ್ ಪಾಷ (38) ಹಾಗೂ ಚಿಕ್ಕನಾಯಕನಹಳ್ಳಿ ಮೂಲದ ಅನಿಲ್ (32), ವಿವೇಕ್ (31) ಮೃತರು. ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಚಿಕ್ಕನಾಯಕನಹಳ್ಳಿ ಮೂಲದ ಅನಿಲ್ (32), ಹಾಗೂ ತುರುವೇಕೆರೆ ಮೂಲದ ಯಾಸ್ಮಿನತಾಬ್ (21), ಸೀಮಾ (64), ಆಸ್ಮ (38) ಅವರಿಗೆ ಗಾಯಗಳಾಗಿವೆ. ಅವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕನಾಯಕನಹಳ್ಳಿ ಕಡೆಯಿಂದ ಬರುತ್ತಿದ್ದ ವೋಕ್ಸ್‌ವ್ಯಾಗನ್ ಕಾರಿನಲ್ಲಿ 3 ಜನ ಪ್ರಯಾಣಿಸುತಿದ್ದರು. ಮತ್ತೊಂದೆಡೆ ತುರುವೇಕೆರೆ ಕಡೆಯಿಂದ ಬರುತಿದ್ದ ಕಿಯಾ ಸಾನೇಟ್ ಕಾರಿನಲ್ಲಿ 5 ಜನ ಪ್ರಯಾಣ ಮಾಡುತಿದ್ದರು. ವೋಕ್ಸ್‌ವ್ಯಾಗನ್ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಬರುತಿದ್ದ ಕಿಯಾ ಕಾರಿಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.