Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾರ್ಮುಝ್ ಜಲಸಂಧಿಯಲ್ಲಿ ತಾತ್ಕಾಲಿಕ ಶಾಂತಿ: ಅಮೆರಿಕ-ಇರಾನ್ ನಡುವೆ ಒಂದು ವಾರದ ಒಪ್ಪಂದ!

Spread the love

ವಾಶಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಾರ್ಮುಝ್ ಜಲಸಂಧಿಯಲ್ಲಿ ಒಂದು ವಾರದ ಅವಧಿಯ ತಾತ್ಕಾಲಿಕ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳು ಸಮ್ಮತಿಸಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
ಮಧ್ಯಸ್ಥಗಾರರ ಮೂಲಕ ಉಭಯ ದೇಶಗಳ ತಾಂತ್ರಿಕ ತಂಡಗಳು ಚರ್ಚೆಯನ್ನು ಮುಂದುವರಿಸುತ್ತಿರುವಾಗ, ಈ ತಾತ್ಕಾಲಿಕ ವ್ಯವಸ್ಥೆಯು ಅಲ್ಲಿ ಶಾಂತಿಯುತ ವಾತಾವರಣವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ವರದಿಯ ಪ್ರಕಾರ, ಅಮೆರಿಕಾದ ಜುಲೈ ನಾಲ್ಕರ ಸಂಭ್ರಮಾಚರಣೆ ಮತ್ತು ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಮುಂಚಿತವಾಗಿ ಈ ಒಪ್ಪಂದ ಏರ್ಪಟ್ಟಿದೆ.

ಆದರೆ, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗು ಸಂಚಾರವನ್ನು ಅಂತಿಮವಾಗಿ ಯಾರು ನಿಯಂತ್ರಿಸಬೇಕು ಎಂಬ ವಿಷಯದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಈ ಅಧಿಕಾರ ತನಗಿದೆ ಎಂದು ಇರಾನ್ ಪ್ರತಿಪಾದಿಸುತ್ತಿದೆ. ಅಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ ಮಧ್ಯಂತರ ವ್ಯವಸ್ಥೆಗಳ ಅವಧಿ ಮುಗಿದ ನಂತರ, ಅಲ್ಲಿಂದ ಹಾದುಹೋಗುವ ಹಡಗುಗಳ ಮೇಲೆ ಸಾರಿಗೆ ಶುಲ್ಕವನ್ನು ವಿಧಿಸುವ ಹಕ್ಕನ್ನು ತನಗೆ ನೀಡಬೇಕೆಂದು ಆಗ್ರಹಿಸುತ್ತಿದೆ. ಆದರೆ, ಟ್ರಂಪ್ ಆಡಳಿತವು ಇರಾನ್‌ ಈ ನಿಲುವನ್ನು ತಿರಸ್ಕರಿಸಿದೆ. ಈ ಜಲಸಂಧಿಯು ಒಂದು ಅಂತರಾ ರಾಷ್ಟ್ರೀಯ ಜಲಮಾರ್ಗವಾಗಿದ್ದು, ಇದರ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸಲು ಇರಾನ್‌ ಗೆ ಯಾವುದೇ ಹಕ್ಕಿಲ್ಲ ಎಂದು ಅಮೆರಿಕ ವಾದಿಸಿದೆ.


Spread the love
Share:

administrator

Leave a Reply

Your email address will not be published. Required fields are marked *