Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾತ್ರಕ್ಕಾಗಿ ಶ್ರದ್ಧಾ ಕಪೂರ್ ಭಾರೀ ಸಾಹಸ: 8 ಕೆಜಿ ಗೆಜ್ಜೆ ಕಟ್ಟಿಕೊಂಡು ಲಾವಣಿ ನೃತ್ಯ!

Spread the love

ಕಲಾವಿದರಲ್ಲಿ ಹಲವರು ಪಾತ್ರಕ್ಕಾಗಿ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ ಅನ್ನೋದಾಗಿ ಕೇಳಿದ್ದೇವೆ. ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಂಥದ್ದೊಂದು ಸಾಹಸ ಮಾಡಿರುವ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಶ್ರದ್ಧಾ ಕಪೂರ್ (Shraddha Kapoor) ಪ್ರಧಾನ ಪಾತ್ರದಲ್ಲಿ ನಟಿಸಿರುವ `ಈಠಾ’ (Eetha) ಚಿತ್ರದ `ಜೀ ಜೀ ರೇ ಜೀ’ ಹಾಡು ರಿಲೀಸ್ ಆಗಿದ್ದು, ಹಾಡಿಗಾಗಿ ಶ್ರದ್ಧಾ ಈ ಚಿತ್ರದಲ್ಲಿ ಕಾಲಿಗೆ ಭಾರೀ ಗಾತ್ರದ ಗೆಜ್ಜೆಗಳನ್ನು ಕಟ್ಟಿ ಲಾವಣಿ ನೃತ್ಯ ಮಾಡುತ್ತಾರೆ. ಹೀಗೆ ನೃತ್ಯ ಮಾಡಲು ಶ್ರದ್ಧಾ ಕಪೂರ್ ಭರ್ತಿ 8 ಕೆಜಿ ತೂಕದ ಗೆಜ್ಜೆಗಳನ್ನು ಕಟ್ಟಿಕೊಂಡು ಕುಣಿದಿದ್ದರು ಅನ್ನೋ ವಿಚಾರ ಗೊತ್ತಾಗಿದೆ.

ಶ್ರದ್ಧಾ ಅಭಿನಯದ ಹಾಡು ರಿಲೀಸ್ ಆಗುತ್ತಿದ್ದಂತೆ ಪಾತ್ರಕ್ಕಾಗಿ ಶ್ರದ್ಧಾ ಸಮರ್ಪಣೆಯ ಭಾವವನ್ನು ಬಿಚ್ಚಿಟ್ಟಿರುವ ಚಿತ್ರದ ನಿರ್ದೇಶಕ ಲಕ್ಷ್ಮಣ್‌ ಉಟೆಕರ್ “ಶ್ರದ್ಧಾ ಈ ಹಾಡಿಗಾಗಿ ದಿನಕ್ಕೆ ಎಂಟು ಗಂಟೆಗಳ ಕಾಲ, ತಮ್ಮ ಎರಡೂ ಕಾಲುಗಳಿಗೆ 8 ಕೆಜಿ ತೂಕದ ಗೆಜ್ಜೆಗಳನ್ನು ಕಟ್ಟಿಕೊಂಡು ಅಭ್ಯಾಸ ನಡೆಸುತ್ತಿದ್ದರು. ಇದರಿಂದ ಅವರ ಪಾದಗಳು ಊದಿಕೊಳ್ಳುತ್ತಿದ್ದವು. `ತಮಾಷಾ’ ಮತ್ತು `ಲಾವಣಿ’ ಕಲಾ ಪ್ರಕಾರಗಳ ಆಳವನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಕಲಿಯಲು ಸಂಪೂರ್ಣವಾಗಿ ಮಘ್ನರಾಗಿರುತ್ತಿದ್ದರು. ಹಾಡಿನ ಚಿತ್ರೀಕರಣದ ಮೊದಲ ದಿನ ಎಲ್ಲವೂ ಚೆನ್ನಾಗಿ ನಡೆಯಿತು. ಆದರೆ ಎರಡನೇ ದಿನ, ಶ್ರದ್ಧಾ ಸ್ನಾಯುಗಳಲ್ಲಿ ಗಾಯವಾದ್ದರಿಂದ ನಾವು ಚಿತ್ರೀಕರಣವನ್ನು ನಿಲ್ಲಿಸಬೇಕಾಯಿತು” ಎಂದು ಹೇಳುತ್ತಾರೆ. ಹೀಗಾಗಿ ಸಿನಿಮಾ ಉತ್ತಮವಾಗಿ ಮೂಡಿಬರೋದ್ರ ಹಿಂದೆ ಕಲಾವಿದರ ಹಲವು ತ್ಯಾಗಗಳೂ ಇರುತ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ

`ಈಠಾ’ ಚಿತ್ರದಲ್ಲಿ ಶ್ರದ್ಧಾ ವಿಠಾಬಾಯಿ ಪಾತ್ರದಲ್ಲಿ ನಟಿಸಿದ್ದು ಅವರು ಮಹಾರಾಷ್ಟ್ರದ ಖ್ಯಾತ ತಮಾಷಾ ಹಾಗೂ ಲಾವಣಿ ಕಲಾವಿದೆಯಾಗಿದ್ದರು. ಈ ಪಾತ್ರಕ್ಕಾಗಿ ಶ್ರದ್ಧಾ ಕಪೂರ್ ಭಾರೀ ತಯಾರಿ ನಡೆಸಿದ್ದರು ಅನ್ನೋದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *