Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕುಡಿದವನ ಕೈಗೆ ಟೆಸ್ಟ್ ಡ್ರೈವ್ ಕಾರು ಕೊಟ್ಟ ಶೋರೂಂ: ನಾಲ್ಕು ವಾಹನ ಪುಡಿಪುಡಿ, ಒಬ್ಬನ ಕಾಲು ಕಟ್!

Spread the love

ಕುಡಿದ ಗ್ರಾಹಕನಿಗೆ ಟೆಸ್ಟ್ ಡ್ರೈವ್ ಕೊಟ್ಟ ಎಡವಟ್ಟು ಮಾಡಿದ ಮಹೀಂದ್ರ ಶೋ ರೂಂ, ಹಲವು ಕಾರಿಗೆ ಡಿಕ್ಕಿ, ಕುಡಿದ ಮತ್ತಿನಲ್ಲಿ ಮನಸ್ಸೋ ಇಚ್ಚೆ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕಂಠಪೂರ್ತಿ ಕುಡಿದ ಗ್ರಾಹಕ
ಕಂಠಪೂರ್ತಿ ಕುಡಿದ ಬಂದ ಗ್ರಾಹಕನೊಬ್ಬನಿಗೆ ಮಹಿಂದ್ರ ಶೋ ರೂಂ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಕೇಸ್ ದಾಖಲಾಗಿದೆ. ಮಹಾದೇವಪುರ ಸಿಬ್ಬಂದಿಗಳು ಅಭಿಲಾಶ್ ಅನ್ನೋ ಗ್ರಾಹಕನ ಹೆಚ್ಚು ಪರಿಶೀಲಿಸದೆ, ಕಣ್ಮುಚ್ಚಿ ಟೆಸ್ಟ್ ಡ್ರೈವ್ ಮಾಡಲು ಮಹೀಂದ್ರ ಎಲೆಕ್ಟ್ರಿಕ್ ಕಾರು ನೀಡಿದ್ದಾರೆ.ಮಹಾದೇವಪುರ ಸಿಬ್ಬಂದಿಗಳ ನಿರ್ಲಕ್ಷ್ಯ
ಮಹಾದೇವರ ಮಹೀಂದ್ರ ಶೋ ರೂಂ ಸಿಬ್ಬಂದಿಗಳು ಗ್ರಾಹಕನ ಟೆಸ್ಟ್ ಡ್ರೈವ್ ಕೇಳಿದ ಬೆನ್ನಲ್ಲೇ ಕಾರು ನೀಡಿದ್ದಾರೆ. ಹೆಚ್ಚಿನ ಪರಿಶೀಲನೆ ಇಲ್ಲದೆ ಕಾರು ನೀಡಲಾಗಿದೆ. ಆದರೆ ಕಂಠಪೂರ್ತಿ ಕುಡಿದಿದ್ದ ಅಭಿಲಾಶ್ ಕಾರನ್ನು ಅಡ್ಡಾದಿಟ್ಟಿ ಚಲಾಯಿಸಿದ್ದಾನೆ. ಇದರ ಪರಿಣಾಮ ಅಪಘಾತ ಸಂಭವಿಸಿದೆ.ಗ್ರಾಹಕನ ಟೆಸ್ಟ್ ಡ್ರೈವ್‌ಗೆ ನಾಲ್ಕು ಕಾರು ಜಖಂ
ಅಭಿಲಾಶ್ ಕುಡಿದ ನಶೆಯಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಹ್ಯುಂಡೈ ಕ್ರೆಟಾ ಸೇರಿದಂತೆ ನಾಲ್ಕು ಕಾರುಗಳು ಜಖಂ ಗೊಂಡಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆಓರ್ವನ ಕಾಲು ಕಟ್, ಆಸ್ಪತ್ರೆಯಲ್ಲಿ ಚಿಕಿತ್ಸೆ
ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದ ಅಭಿಲಾಶ್, ರಮೇಶ್ ಎಂಬುವವರಿಗೂ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ರಮೇಶ್ ಕಾಲು ಕಟ್ ಆಗಿದೆ. ರಮೇಶ್ ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಗ್ರಾಹಕ ಅಭಿಲಾಶ್ ಟೆಸ್ಟ್ ಡ್ರೈವ್ ಮಾಡಿ ಹಲವು ಅವಾಂತರ ಸೃಷ್ಟಿಸಿದ್ದಾನೆ.ಅಭಿಲಾಶ್ ಮೇಲೆ ಸ್ಥಳೀಯರಿಂದ ಹಲ್ಲೆ
ರಮೇಶ್ ಕಾಲು ಮುರಿದು ನಾಲ್ಕು ಕಾರುಗಳನ್ನು ಜಖಂ ಗೊಳಿಸಿದ ಅಭಿಲಾಶ್‌ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಅಭಿಲಾಶ್‌ನ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿದ್ದ ಅಭಿಲಾಶ್‌ನನ್ನು ಆಸ್ಪತ್ರೆ ದಾಖಲಿಸಿದ್ದಾರೆಅಭಿಲಾಶ್‌ಗೆ ನೋಟಿಸ್
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಲಾಶ್‌ಗೆ ಮಹಾದೇವಪುರ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದಾರೆ. ಭಾರತೀಯ ಮೋಟಾರು ಕಾಯ್ದೆ ಹಾಗೂ BNS 125(a), 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *