ಸನಾತನ ಧರ್ಮವೇ ಪ್ರಥಮ: ಸಂಘಟಿತ ಹೋರಾಟದೊಂದಿಗೆ ಬಲವಾದ ಜನಾಂದೋಲನದ ತುರ್ತು ಅಗತ್ಯ! – ರಾಜೇಶ್ ಪವಿತ್ರನ್

ಬೆಂಗಳೂರಿನಲ್ಲಿ ನಡೆದ ಹಿಂದೂ ಮಹಾಸಭಾದ ನೂತನ ರಾಜ್ಯ ಭವನದ ಉದ್ಘಾಟನಾ ಸಮಾರಂಭದಲ್ಲಿ ದಿ ಸಫ್ರಾನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್ ಪವಿತ್ರನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿದರು. ಹಿಂದೂ ಸಮಾಜವು ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಧರ್ಮದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಂಘಟಿತರಾಗಬೇಕಾದ ತುರ್ತು ಅವಶ್ಯಕತೆಯಿದೆ ಎಂದು ಅವರು ಈ ಸಂದರ್ಭದಲ್ಲಿ ಬಲವಾಗಿ ಕರೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, ನ್ಯಾಯಾಂಗದ ಮೇಲಿನ ನಂಬಿಕೆ, ನಮ್ಮ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸ, ಅಷ್ಟೇ ಅಲ್ಲ ಮಾಧ್ಯಮಗಳ ಮೇಲಿನ ಭರವಸೆಯನ್ನೂ ಜನರು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಧರ್ಮವನ್ನು ಪುನರ್ಸ್ಥಾಪಿಸಲು ಒಂದು ಬಲವಾದ ಜನಾಂದೋಲನದ ಅತ್ಯಗತ್ಯವಿದ್ದು, ಈ ಕಾರ್ಯಕ್ಕಾಗಿ ಪ್ರತಿಯೊಬ್ಬರೂ ಸಿದ್ಧರಿರಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಡಾ. ಎಲ್. ಕೆ. ಸುವರ್ಣ, ಲೋಕೇಶ್ ಉಳ್ಳಾಲ್ ಮುಂತಾದ ಗಣ್ಯ ನಾಯಕರು ಉಪಸ್ಥಿತರಿದರು.