ವಾಂಖೆಡೆಯಲ್ಲಿ ರೋಹಿತ್-ರಿಯಾನ್ ಸಿಡಿಲಬ್ಬರ: ಲಕ್ನೋ ತಂಡವನ್ನು ಆರು ವಿಕೆಟ್ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್

ಮುಂಬೈ, : ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (84 ರನ್, 44 ಎಸೆತ, 6 ಬೌಂಡರಿ, 7 ಸಿಕ್ಸರ್) ಹಾಗೂ ರಿಯಾನ್ ರಿಕೆಲ್ಸನ್ (83 ರನ್, 32 ಎಸೆತ, 6 ಬೌಂಡರಿ, 7 ಸಿಕ್ಸರ್) ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಲಕ್ಕೊ ಸೂಪರ್ ಜಯಂಟ್ಸ್ ತಂಡವನ್ನು ಆರು ವಿಕೆಟ್ಗಳ ಅಂತರದಿಂದ ಮಣಿಸಿದೆ.
ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 47ನೇ ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ಷ್ಮಿ ತಂಡವು ನಿಕೊಲಸ್ ಪೂರನ್ (63 ರನ್, 21 ಎಸೆತ, 1 ಬೌಂಡರಿ, 8 ಸಿಕ್ಸರ್) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 228 ರನ್ ಗಳಿಸಿದೆ.

ಗೆಲ್ಲಲು 229 ರನ್ ಗುರಿ ಬೆನ್ನಟ್ಟಿದ ಮುಂಬೈ ತಂಡವು 18.4 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಇನಿಂಗ್ಸ್ ಆರಂಭಿಸಿದ ರಿಕೆಲ್ಸನ್ ಹಾಗೂ ರೋಹಿತ್ 10.5 ಓವರ್ಗಳಲ್ಲಿ 143 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ನಮನ್ ಧೀರ್ (ಔಟಾಗದೆ 23, 12 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ವಿಲ್ ಜಾಕ್ಸ್ (ಔಟಾಗದೆ 10, 4 ಎಸೆತ, 1 ಸಿಕ್ಸರ್ ಗೆಲುವಿನ ವಿಧಿ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ಲಕ್ಷ್ಮಿ ತಂಡದ ಇನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್ (44 ರನ್, 25 ಎಸೆತ, 4 ಬೌಂಡರಿ, 3 ಸಿಕ್ಸರ್ ಹಾಗೂ ಜೋಶ್ ಇಂಗ್ಲಿಸ್ (13 ರನ್, 5 ಎಸೆತ) ಉತ್ತಮ ಆರಂಭ ಒದಗಿಸಲು ವಿಫಲರಾದರು. ಇಂಗ್ಲಿಸ್ ಕೇವಲ 13 ರನ್ ಗಳಿಸಿ 2.3ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಆಗ ಜೊತೆಯಾದ ಪೂರನ್ ಹಾಗೂ ಮಾರ್ಷ್ ಎರಡನೇ ವಿಕೆಟ್ಗೆ ಕೇವಲ 35 ಎಸೆತಗಳಲ್ಲಿ 94 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಪೂರನ್ ಹಾಗೂ ಮಾರ್ಷ್ 9ನೇ ಓವರ್ನಲ್ಲಿ ಕಾರ್ಬನ್ ಬಾಷ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ರಿಷಭ್ ಪಂತ್ (15 ರನ್) ತನ್ನ ಕಳಪೆ ಪ್ರದರ್ಶನ ಮುಂದುವರಿಸಿದರು. ಅಕ್ಷತ್ ರಘುವಂಶಿ (11 ರನ್) ಬೇಗನೆ ಔಟಾದರು.
ಆರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 49 ಎಸೆತಗಳಲ್ಲಿ 68 ರನ್ ಸೇರಿಸಿದ ಹಿಮ್ಮತ್ ಸಿಂಗ್ (ಔಟಾಗದೆ 40, 31 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಮಕ್ರ್ರಮ್ (ಔಟಾಗದೆ 31, 25 ಎಸೆತ, 1 ಬೌಂಡರಿ, 1 ಸಿಕ್ಸರ್) ಲಕ್ಷ್ಮಿ ತಂಡವು 228 ರನ್ ಗಳಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ಲಕ್ಕೆ ಸೂಪರ್ ಜಯಂಟ್ಸ್: 20 ಓವರ್ಗಳಲ್ಲಿ 228/5
(ನಿಕೊಲಸ್ ಪೂರನ್ 63, ಮಿಚೆಲ್ ಮಾರ್ಷ್ 44, ಹಿಮ್ಮತ್ ಸಿಂಗ್ ಔಟಾಗದೆ 40, ಮಕ್ರ್ರಮ್ ಔಟಾಗದೆ 31, ಕಾರ್ಬನ್ ಬಾಷ್ 2-20)
ಮುಂಬೈ ಇಂಡಿಯನ್ಸ್: 18.4 ಓವರ್ಗಳಲ್ಲಿ 229/4
(ರೋಹಿತ್ ಶರ್ಮಾ 84, ರಿಕೆಲ್ವನ್ 83, ನಮನ್ ಧೀರ್ ಔಟಾಗದೆ 23, ಎಂ. ಸಿದ್ದಾರ್ಥ್ 2-47)