ಲಕ್ನೋ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ; ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೆ ಜಂಪ್!

ಜೈಪುರ: ಆರಂಭಿಕ ಬ್ಯಾಟರ್ ಗಳಾದ ವೈಭವ್ ಸೂರ್ಯವಂಶಿ (93 ರನ್, 38 ಎಸೆತ, 7 ಬೌಂಡರಿ, 10 ಸಿಕ್ಸರ್) ಹಾಗೂ ಯಶಸ್ವಿ ಜೈಸ್ವಾಲ್ (43 ರನ್, 23 ಎಸೆತ, 8 ಬೌಂಡರಿ, 1 ಸಿಕ್ಸರ್ ಅವರ ಭರ್ಜರಿ ಆರಂಭದ ನೆರವಿನಿಂದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವು ಲಕ್ಷ್ಮಿ ಸೂಪರ್ ಜಯಂಟ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿದೆ.
ಈ ವರ್ಷ ಜೈಪುರದಲ್ಲಿ ಮೊದಲ ಗೆಲುವು ದಾಖಲಿಸಿದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡ ಅಗ್ರ-4ರಿಂದ ಹೊರಬಿದ್ದಿದೆ.

ಮಂಗಳವಾರ ನಡೆದ 64ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಕ್ಕೊ ತಂಡವು ಆರಂಭಿಕ ಬ್ಯಾಟರ್ ಗಳಾದ ಮಿಚೆಲ್ ಮಾರ್ಷ್ (96 ರನ್, 57 ಎಸೆತ, 11 ಬೌಂಡರಿ, 5 ಸಿಕ್ಸರ್) ಹಾಗೂ ಜೋಶ್ ಇಂಗ್ಲಿಸ್ (60 ರನ್, 29 ಎಸೆತ, 7 ಬೌಂಡರಿ, 3 ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ 20 ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 220 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ರಾಜಸ್ಥಾನ ತಂಡವು 19.1 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 225 ರನ್ ಗಳಿಸಿತು. ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ (ಔಟಾಗದೆ 53 ರನ್, 38 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಡೊನಾವನ್ ಫೆರೇರ (ಔಟಾಗದೆ 16 ರನ್, 10 ಎಸೆತ) ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಟ್ಟರು.
ರಾಜಸ್ಥಾನ ತಂಡಕ್ಕೆ ಜೈಸ್ವಾಲ್ ಹಾಗೂ ಸೂರ್ಯವಂಶಿ 6.3 ಓವರ್ ಗಳಲ್ಲಿ 75 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಜೈಸ್ವಾಲ್ ವಿಕೆಟ್ ಪಡೆದ ಆಕಾಶ್ ಸಿಂಗ್ ಈ ಜೋಡಿಯನ್ನು ಬೇರ್ಪಡಿಸಿದರು.
ಎರಡನೇ ವಿಕೆಟ್ 105 ರನ್ ಜೊತೆಯಾಟ ನಡೆಸಿದ ಸೂರ್ಯವಂಶಿ ಹಾಗೂ ಧ್ರುವ ಜುರೆಲ್ (ಔಟಾಗದೆ 40 ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸೂರ್ಯವಂಶಿ ಕೇವಲ 23 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಗಳ ನೆರವಿನಿಂದ ಅರ್ಧಶತಕ ಪೂರೈಸಿದರು.
ಇದಕ್ಕೂ ಮೊದಲು ಲಕ್ಷ್ಮಿ ಇನಿಂಗ್ಸ್ ಆರಂಭಿಸಿದ ಮಾರ್ಷ್ ಹಾಗೂ ಇಂಗ್ಲಿಸ್ 8.2 ಓವರ್ ಗಳಲ್ಲಿ 109 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಇಂಗ್ಲಿಸ್ ವಿಕೆಟ್ ಉರುಳಿಸಿದ ಯಶ್ ರಾಜ್ ಪೂಂಜಾ ಈ ಜೋಡಿಯನ್ನು ಬೇರ್ಪಡಿಸಿದರು. ಎರಡನೇ ವಿಕೆಟ್ಟೆ 42 ರನ್ ಸೇರಿಸಿದ ಮಾರ್ಷ್ ಹಾಗೂ ನಿಕೊಲಸ್ ಪೂರನ್ (16 ರನ್) ತಂಡವನ್ನು ಆಧರಿಸಿದರು. ಮಾರ್ಷ್ ಹಾಗೂ ನಾಯಕ ರಿಷಭ್ ಪಂತ್ (35 ರನ್, 23 ಎಸೆತ, 2 ಬೌಂಡರಿ, 2 ಸಿಕ್ಸರ್) ಮೂರನೇ ವಿಕೆಟ್ಟೆ 64 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ರಾಜಸ್ಥಾನದ ಪರವಾಗಿ ಯಶ್ ರಾಜ್ ಪೂಂಜಾ (2-35) ಯಶಸ್ವಿ ಪ್ರದರ್ಶನ ನೀಡಿದರು.
ಸಂಕ್ಷಿಪ್ತ ಸ್ಕೋರ್
ಲಕ್ಷ್ಮಿ ಸೂಪರ್ ಜಯಂಟ್ಸ್: 20 ಓವರ್ ಗಳಲ್ಲಿ 220/5
(ಮಿಚೆಲ್ ಮಾರ್ಷ್ 96, ಜೋಶ್ ಇಂಗ್ಲಿಸ್ 60, ರಿಷಭ್ ಪಂತ್ 35, ಯಶ್ ರಾಜ್ ಪೂಂಜಾ 2-35)
ರಾಜಸ್ಥಾನ ರಾಯಲ್ಸ್: 19.1 ಓವರ್ ಗಳಲ್ಲಿ 225/3
(ವೈಭವ್ ಸೂರ್ಯವಂಶಿ 93, ಯಶಸ್ವಿ ಜೈಸ್ವಾಲ್ 43, ಧ್ರುವ ಜುರೆಲ್ ಔಟಾಗದೆ 53, ಮುಕ್ಸಿನ್ ಖಾನ್ 1-31)