Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಿಎಂಸಿಯಲ್ಲಿ ರಾಜೀನಾಮೆ ಪರ್ವ; ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲು!

Spread the love

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ (TMC) ಒಂದು ಕಡೆ ರಾಜೀನಾಮೆ ಪರ್ವ ಮುಂದುವರಿದಿದೆ. ಘಟಾನುಘಟಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ (Mamata Banerjee) ಮತ್ತೊಂದು ಶಾಕ್‌ ಎದುರಾಗಿದೆ.

ಕಳೆದ ಮಾರ್ಚ್‌ ತಿಂಗಳಲ್ಲಿ ರಾಜಕೀಯ ಭಾಷಣದ ವೇಳೆ ಕೋಮುದ್ವೇಷ ಹರಡುವ ಹೇಳಿಕೆ ನೀಡಿದ್ದರ ಆರೋಪದ ಮೇಲೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಾಗಿದೆರಾಜಕೀಯ ಭಾಷಣದ ವೇಳೆ ದೀದಿ, ʻಒಂದು ನಿರ್ದಿಷ್ಟ ಸಮುದಾಯ ಒಟ್ಟಿಗೆ ಬಂದರೆ ಅದು ಇತರರ ಮೇಲೆ ಅಪಾಯಕಾರಿ ಪರಿಣಾಮ ಬೀರಬಹುದುʼ ಎಂದು ಮಮತಾ ಹೇಳಿದ್ದರು. ಅವರ ಸಾರ್ವಜನಿಕ ಭಾಷಣಗಳನ್ನ ಉಲ್ಲೇಖಿಸಿ, ಕೋಲ್ಕತ್ತಾ ನಿವಾಸಿಯೊಬ್ಬರು ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಕೋಲ್ಕತ್ತಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *