ಖಾಸಗಿ ರಸ್ತೆ ಅತಿಕ್ರಮಣ ಕೆ.ಸಿ. ನಾಯ್ಕ್ ಹಾಗೂ ಸಂಜಿತ್ ನಾಯ್ಕ್ ವಿರುದ್ಧ FIR

ಮಂಗಳೂರಿನ ಶಕ್ತಿನಗರದ ಪ್ರಶಾಂತಿ ರಸ್ತೆಯಲ್ಲಿರುವ ಜಮೀನಿನ ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಅತಿಕ್ರಮಣ ನಡೆಸಿ, ಜೀವಬೆದರಿಕೆ ಹಾಕಿರುವ ಘಟನೆ ನಡೆದಿದ್ದು,

ಈ ಕುರಿತು ಸುರೇಶ್ ಶೆಟ್ಟಿ ಅವರು ವಾಮಂಜೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಶಕ್ತಿನಗರದ ಪ್ರಶಾಂತಿ ರಸ್ತೆಯ ನಿವಾಸಿ ಸುರೇಶ್ ಶೆಟ್ಟಿ ಅವರು ಜಯರಾಮ ಶೆಟ್ಟಿ ಅವರಿಗೆ ಸೇರಿದ ಪದವು ಗ್ರಾಮದಲ್ಲಿರುವ ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಈ ಜಮೀನಿಗೆ ಹೋಗಲು ಉಮಾಮಹೇಶ್ವರ ದೇವಸ್ಥಾನದವರು ರಸ್ತೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದರು.
ಈ ಮೊದಲೇ ಇದ್ದ ರಸ್ತೆ ಸಂಪರ್ಕವನ್ನು ಕಳೆದ ಒಂದು ವಾರದಿಂದ ಅಭಿವೃದ್ಧಿಪಡಿಸಿ ಗೇಟ್ ಅಳವಡಿಸಲಾಗಿತ್ತು. ದಿನಾಂಕ 13-04-2026ರ ಸೋಮವಾರ ಕೆಲಸ ಮುಗಿಸಿ ಗೇಟ್‌ಗೆ ಬೀಗ ಹಾಕಲಾಗಿತ್ತು, ಆದರೆ ಮಾರನೇ ದಿನ ಬೆಳಿಗ್ಗೆ ಕೆಲಸಗಾರರು ಬಂದು ನೋಡಿದಾಗ ನಮ್ಮ ಪಕ್ಕದ ಜಮೀನಿನ ಮಹಾಬಲೇಶ್ವರ ಬಿಲ್ದರ್ಸ್ ಹಾಗು ಶಕ್ತಿ ರೆಸಿಡೆನ್ಸಿ ಶಾಲೆಯ ಮಾಲಕರಾದ ಕೆ.ಸಿ. ನಾಯ್ಕ್ , ಅವರ ಮಗ ಸಂಜಿತ್ ನಾಯ್ಕ್ ಹಾಗೂ ಅವರ ಸಹಚರರು ಗೇಟ್‌ನ ಬೀಗ ಮುರಿದು ಅತಿಕ್ರಮಣ ಮಾಡಿರುವುದು ಕಂಡುಬಂದಿದೆ. ಈ ಕೃತ್ಯದಿಂದ ಸುಮಾರು 25 ಸಾವಿರ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಜಾಮಿನಲ್ಲಿದ್ದ ಖಾಸಗಿ ರಸ್ತೆಯನ್ನು ತಡೆದು ದಬ್ಬಾಳಿಕೆ ನಡೆಸದಿದ್ದು ಸುರೇಶ್ ಶೆಟ್ಟಿ ಅವರಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಮೀನು ಪ್ರವೇಶಿಸಿದರೆ ಕೈಕಾಲು ಮುರಿಯುವ ಹಾಗೂ ಕೊಲೆ ಮಾಡುವ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ವಾಮಂಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.