ವಿಟ್ಲ ಸರಗಳ್ಳತನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೋ ಸುಳ್ಳು ;ಪೊಲೀಸರಿಂದ ಸ್ಪಷ್ಟನೆ

ವಿಟ್ಲ: ಕೋಡಪದವು ಎಂಬಲ್ಲಿ ಮಗುವಿನ ಕುತ್ತಿಗೆಯಿಂದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು, ಎ.12ರಂದು ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕಸಿದು ಪರಾರಿಯಾಗಿದ್ದಾನೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಟಿ.ಎಂ.ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಳ್ಳನೆಂದು ಪ್ರಸಾರವಾಗುತ್ತಿತ್ತು.

ಈ ಸಂಬಂಧ ತನಿಖೆ ನಡೆಸಿರುವ ವಿಟ್ಲ ಪೊಲೀಸರು, ಈ ಪ್ರಕರಣಕ್ಕೂ ಈ ಭಾವಚಿತ್ರಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಬೈಕ್ ಸವಾರನನ್ನು ವಿಚಾರಿಸಿದಾಗ ಈತನಿಗೂ, ಮಗುವಿನ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬ ಅಂಶ ತಿಳಿಯಿತು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.