ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿ ವೀಡಿಯೊ ಚಿತ್ರೀಕರಿಸಿದ್ದ ಕಾಮುಕನ ಬಂಧನ

ಅಮರಾವತಿ:ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡು ಈ ನಿರ್ಲಜ್ಜ ಕೃತ್ಯದ ವೀಡಿಯೊಗಳನ್ನು ಚಿತ್ರೀಕರಿಸಿದ್ದ ಆರೋಪಿಯನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಸಾರ್ವಜನಿಕರಲ್ಲಿ ಭಾರೀ ಆಕ್ರೋಶವನ್ನು ಸೃಷ್ಟಿಸಿದ್ದು ತೀವ್ರ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆರೋಪಿ ಅಯಾನ್ ಅಹ್ಮದ್ ತನ್ನೀರ್ (19) ಸುಮಾರು 180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾನೆ ಮತ್ತು ಇಂತಹ 350ಕ್ಕೂ ಅಧಿಕ ವೀಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಕೆಲವು ಸ್ಥಳೀಯ ರಾಜಕೀಯ ಸಂಘಟನೆಗಳು ಆರೋಪಿಸಿವೆ. ಆದರೆ ಪೊಲೀಸರು ಈವರೆಗೆ ಎಂಟು ಬಾಲಕಿಯರು ಲೈಂಗಿಕ ಶೋಷಣೆಗೆ ಗುರಿಯಾಗಿದ್ದನ್ನು ದೃಢಪಡಿಸಿಕೊಂಡಿದ್ದಾರೆ.

ಪೊಲೀಸರು ಎ.11ರಂದು ಅಮರಾವತಿಯ ಪರತವಾಡಾದಲ್ಲಿ ತನ್ನೀರ್‌ನನ್ನು ಬಂಧಿಸಿದ್ದುನ್ಯಾಯಾಲಯವು ಎ.21ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಅಧಿಕಾರಿಗಳು ಆರೋಪಿಯ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಅದು ಹಲವಾರು ಆಕ್ಷೇಪಾರ್ಹ ವೀಡಿಯೊಗಳನ್ನು ಒಳಗೊಂಡಿದೆ. ಆತ ಅಳಿಸಿರುವ ಹೆಚ್ಚುವರಿ ಡೇಟಾದ ಮರುಪ್ರಾಪ್ತಿಗಾಗಿ ವಿಧಿವಿಜ್ಞಾನ ತಂಡಗಳು ಶ್ರಮಿಸುತ್ತಿವೆ.
ತನ್ನೀರ್ ವಾಟ್ಸಆ್ಯಪ್ ಮತ್ತು ಸ್ನಾಪ್ಟಾಟ್ ಗ್ರೂಪ್‌ಗಳ ಮೂಲಕ ಹಲವಾರು ಬಾಲಕಿಯರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡು ಅವರ ನಂಬಿಕೆಯನ್ನು ಗಳಿಸಿದ್ದ ಮತ್ತು ತನ್ನೊಂದಿಗೆ ಸಂಬಂಧಕ್ಕೆ ಅವರಿಗೆ ಆಮಿಷವೊಡ್ಡಿದ್ದ ಬಾಲಕಿಯರನ್ನು ಮುಂಬೈ ಮತ್ತು ಪುಣೆಗೆ ಕರೆದೊಯ್ಯುತ್ತಿದ್ದ ಆತ ಅವರ ಒಪ್ಪಿಗೆಯಿಲ್ಲದೆ ಆಪ್ತಕ್ಷಣಗಳ ವೀಡಿಯೊಗಳನ್ನು ಚಿತ್ರೀಕರಿಸಿ ನಂತರ ಅವರನ್ನು ಬೆದರಿಸಲು ಮತ್ತು ಬ್ಲಾಕ್ ಮೇಲ್ ಮಾಡಲು ಅವುಗಳನ್ನು ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ಈವರೆಗೆ ಎಂಟು ಸಂತ್ರಸ್ತ ಬಾಲಕಿಯರನ್ನು ಗುರುತಿಸಿದ್ಭುತನಿಖೆಯು ಮುಂದುವರಿದಂತೆ ಈ ಸಂಖ್ಯೆ ಹೆಚ್ಚಬಹುದು. ಅಶ್ಲೀಲ ವೀಡಿಯೊಗಳ ಚಿತ್ರೀಕರಣ ಅಥವಾ ಪ್ರಸಾರದ ಹಿಂದೆ ಸಂಘಟಿತ ಜಾಲವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತರಿಗೆ ನೆರವಾಗಲು ಮತ್ತು ದೂರುಗಳನ್ನು ಸಲ್ಲಿಸುವಂತೆ ಉತ್ತೇಜಿಸಲು ಪೊಲೀಸರು ಮಹಿಳಾ ಅಧಿಕಾರಿಗಳನ್ನೊಂಡ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.
ಪ್ರಕರಣದಲ್ಲಿ ಉಜೇರ್ ಖಾನ್ ಇಟ್ಬಾಲ್ ಖಾನ್ ಎಂಬ ಇನ್ನೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈತ ತನೀರ್‌ನ ಮೊಬೈಲ್‌ನಿಂದ ಆಕ್ಷೇಪಾರ್ಹ ಮತ್ತು ಅಶ್ಲೀಲ ವೀಡಿಯೊಗಳನ್ನು ಡೌಗ್ಲೋಡ್ ಮಾಡಿಕೊಂಡಿದ್ದ ಮತ್ತು ಸುಮಾರು 100 ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿ ತನ್ನೀರ್ ಅಲಿಯಾಸ್ ಮುಹಮ್ಮದ್ ಅಯಾಜ್‌ನ ನಿವಾಸದ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ಅಚಲ್ಪುರ ನಗರಸಭೆಯ ಅಧಿಕಾರಿಗಳು ಬುಟ್ಟೋಜರ್ ಕಾರ್ಯಾಚರಣೆ ನಡೆ ಕೆಡವಿದ್ದಾರೆ.
ಬಿಜೆಪಿ ಶಾಸಕ ಪ್ರವೀಣ ತಾಯಡೆ ಅವರು ನೆಲಸಮ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು.
ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನ್ನೀರ್ ಕುಟುಂಬಕ್ಕೆ ನೋಟಿಸ್ ನೀಡಿದ್ದರು ಎನ್ನಲಾಗಿದ್ದುಆತನ ಮನೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.