ರಾಘವ್ ಛಡ್ಡಾ ಬಿಜೆಪಿ ಸೇರ್ಪಡೆಗೆ ಪ್ರಕಾಶ್ ರಾಜ್ ವ್ಯಂಗ್ಯ: ದಾವೂದ್ ಇಬ್ರಾಹಿಂ ಜೊತೆಗಿನ ಸ್ನೇಹಕ್ಕೆ ಹೋಲಿಸಿ ಲೇವಡಿ

ಹೊಸದಿಲ್ಲಿ: ಆಮ್ ಆದ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ನಿರ್ಧಾರವನ್ನು ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಈ ನಿರ್ಧಾರವನ್ನು ಅವರು ಭೂಗತ ಲೋಕದ ನಾಯಕ ದಾವೂದ್ ಇಬ್ರಾಹಿಂ ಜೊತೆ ಕೈಜೋಡಿಸುವುದಕ್ಕೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.- Raghav Chaddi
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಾಶ್ ರಾಜ್, “ಪೊಲೀಸ್ ವ್ಯವಸ್ಥೆ ತನ್ನ ಕರ್ತವ್ಯದಿಂದ ದೂರವಾಗಿದೆ. ಆದ್ದರಿಂದ ನಾನು ರಾಜೀನಾಮೆ ನೀಡಿ ದಾವೂದ್ ಇಬ್ರಾಹಿಂ ಜೊತೆ ಸೇರುತ್ತಿದ್ದೇನೆ – ರಾಘವ್ ಚಡ್ಡಿ” ಎಂದು ವ್ಯಂಗ್ಯವಾಗಿ ಬರೆದು, ಛಡ್ಡಾ ನೀಡಿರುವ ಕಾರಣಗಳನ್ನು ಲೇವಡಿ ಮಾಡಿದ್ದಾರೆ. ಆಮ್ ಆದ್ಮ ಪಕ್ಷದ ಮೌಲ್ಯಗಳಿಂದ ದೂರವಾಗಿದೆ ಎಂಬ ಕಾರಣ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂಬ ಛಡ್ಡಾ ಅವರ ಸಮರ್ಥನೆಯನ್ನು ಅವರು ಟೀಕಿಸಿದ್ದಾರೆ.ಇನ್ನೊಂದೆಡೆ, ಆಮ್ ಆದ್ಮಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಛಡ್ವಾ ಪಕ್ಷದ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯವೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ತಿಳಿಸಿದ್ದಾರೆ. ರಾಜ್ಯಸಭೆಯ ಉಪನಾಯಕ ಹುದ್ದೆಯಿಂದ ಅವರನ್ನು ತೆಗೆದುಹಾಕಿದ ಬಳಿಕ ಈ ಅಸಮಾಧಾನ ಮತ್ತಷ್ಟು ಗಾಢವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
“ನನ್ನ ಯೌವ್ವನದ 15 ವರ್ಷಗಳನ್ನು ಅರ್ಪಿಸಿ ಬೆಳೆಸಿದ ಪಕ್ಷವು ಈಗ ತನ್ನ ಮೂಲ ಮೌಲ್ಯಗಳಿಂದ ದೂರವಾಗಿದೆ. ಅದು ದೇಶದ ಹಿತಾಸಕ್ತಿಗಿಂತ ಸ್ವಾರ್ಥಪರ ರಾಜಕೀಯದತ್ತ ಸಾಗುತ್ತಿದೆ. ಇಷ್ಟು ದಿನ ನಾನು ನನ್ನ ಆಲೋಚನೆಗಳಿಗೆ ಹೊಂದಿಕೆಯಾಗದ ಪಕ್ಷದಲ್ಲಿ ಇದ್ದೆ ಎಂಬ ಭಾವನೆ ಮೂಡಿತ್ತು. ಆದ್ದರಿಂದ ಆಮ್ ಆದ್ಮ ಪಕ್ಷವನ್ನು ತೊರೆದು, ಸಾರ್ವಜನಿಕರ ಹತ್ತಿರವಾಗಲು ನಿರ್ಧರಿಸಿದ್ದೇನೆ” ಎಂದು ರಾಘವ್ ಛಡ್ಡಾ ತಿಳಿಸಿದ್ದರು.
