Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಖಾತೆ ಬದಲಾವಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು’: ಸಚಿವ ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ!

Spread the love

ಬೆಂಗಳೂರು : ‘ಬೆಂಗಳೂರಿನ ಜನರ ಬಗ್ಗೆ ಅಪಾರ ನಿರೀಕ್ಷೆ ಇದೆ. ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಬೇಕು’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಹಿರಿಯ ನಾಯಕರಲ್ಲಿದ್ದ ಅಸಮಾಧಾನ ಶಮನ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೂಡ ತಮ್ಮ ಖಾತೆ ಕುರಿತು ಅಸಮಾಧಾನಗೊಂಡಿದ್ದರು. ಅಲ್ಲದೆ, ಈ ‘ಖಾತೆ ಕುರಿತ ಗೊಂದಲ’ ಪರಿಹರಿಸುವಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದಿಲ್ಲಿಗೆ ತೆರಳಿದ್ದ ಅವರು ಮಾಧ್ಯಮದವರ ಜೊತೆ ಶನಿವಾರ ಮಾತನಾಡಿದರು.
‘ಜವಾಬ್ದಾರಿ ವಹಿಸುವಾಗ ಸ್ಪಷ್ಟತೆ ಇದ್ದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಇಲ್ಲವಾದರೆ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಕೊಡಲು ಆಗುವುದಿಲ್ಲ. ಅಸಮಾಧಾನ ಇಲ್ಲ, ಕಠಿಣವಾದ ಜವಾಬ್ದಾರಿ ವಹಿಸಿದ್ದಾರೆ ಎಂದರು.
‘ನಾನು ಏನೇ ಹೇಳಿರೂ ಉತ್ತಮದಾಯಕವಾಗಿರುತ್ತದೆ. ಸ್ಪಷ್ಟತೆ ಇದ್ದರೆ ನಿರೀಕ್ಷೆಯಷ್ಟು ಕೆಲಸ ಮಾಡಬಹುದು. ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಹೇಳಿದ್ದೇನೆ. ಮುಖ್ಯಮಂತ್ರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *