Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಅಧ್ಯಯನ ಪುಸ್ತಕ ಮತ್ತು ತೀವ್ರ ಆಕ್ರೋಶ!

Spread the love

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಮಹಾತ್ಮಗಾಂಧಿ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಮತ್ತು ಮಂಗಲ್ ಪಾಂಡೆಯಂತಹ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸೇರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿರುವ ಕಲಿಕಾ ಪುಸ್ತಕದ ಒಂದು ಪುಟದಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಗಳು ಮತ್ತು ಘೋಷಣೆಗಳು’ (Freedom Fighter Quotes and Slogans) ಎಂಬ ಶೀರ್ಷಿಕೆ ನೀಡಲಾಗಿದೆ. ಈ ಪಟ್ಟಿಯಲ್ಲಿ ಮಹಾತ್ಮಗಾಂಧಿ, ನೇತಾಜಿ ಸುಭಾಷ್‌ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಘೋಷಣೆಗಳಾದ ‘ಮೈ ಭೀ ಚೌಕಿದಾರ್, ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ್’ ಕೂಡ ಉಲ್ಲೇಖಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕರಾಗಿರುವ ‘ಶಿವಂತ್ ಸರ್‌’ಗೆ ಸಂಬಂಧಿಸಿದೆ ಎನ್ನಲಾದ ಈ ಅಧ್ಯಯನ ಪುಸ್ತಕದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಪಠ್ಯಪುಸ್ತಕಗಳು ಮಕ್ಕಳಲ್ಲಿ ಟ್ರೈನ್ವಾಶ್ ಮಾಡುತ್ತಿವೆ ಎಂದು ಹಲವರು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.
ನರೇಂದ್ರ ಮೋದಿ 1950ರ ಸೆಪ್ಟೆಂಬರ್ 17ರಂದು ಜನಿಸಿದ್ದರು. ಭಾರತವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದಿತ್ತು. ಅಂದರೆ, ಮೋದಿ ಸ್ವಾತಂತ್ರ್ಯದ ಮೂರು ವರ್ಷಗಳ ಬಳಿಕ ಜನಿಸಿದ್ದರು. ಹಲವರು ಇದನ್ನು ಉಲ್ಲೇಖಿಸಿ, ಇತಿಹಾಸಕ್ಕೆ ಮೋದಿ ಹೆಸರನ್ನು ಬಲವಂತವಾಗಿ ತೂರಿಸುವ ಪ್ರಯತ್ನ ಎಂದು ವ್ಯಂಗ್ಯವಾಡಿದ್ದಾರೆ.

“1950ರಲ್ಲಿ, ಅಂದರೆ ಭಾರತ ಸ್ವಾತಂತ್ರ್ಯ ಪಡೆದ ಮೂರು ವರ್ಷಗಳ ಬಳಿಕ ಜನಿಸಿದ ವ್ಯಕ್ತಿಯೊಬ್ಬರನ್ನು ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರನಂತೆ ಪಠ್ಯಪುಸ್ತಕಗಳಿಗೆ ಸೇರಿಸುವ ಈ ದೇಶದಲ್ಲಿ ಯಾವ ಮಟ್ಟದ ಟ್ರೈನ್ವಾಶ್ ಗೆ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ಊಹಿಸಿ. ಇದು ತಮಾಷೆಯ ವಿಷಯವಲ್ಲ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಉತ್ತರ ಕೊರಿಯಾದಂತಹ ದೇಶವಾಗುವತ್ತ ನಾವು ಇಡುತ್ತಿರುವ ಮತ್ತೊಂದು ಹೆಜ್ಜೆಯಂತಿದೆ” ಎಂದು ರೋಶನ್ ರೈ ಎಂಬವರು ಟ್ವಿಟ್ ಮಾಡಿದ್ದಾರೆ.
ರಮೇಶ್ ಶ್ರೀವತ್ಸ ಅವರು ಈ ಕುರಿತು ಟ್ವಿಟ್ ಮಾಡಿ, “ನರೇಂದ್ರ ಮೋದಿ ಅವರನ್ನು ಇಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂಬ ಕಾರಣಕ್ಕೆ ಸೇರಿಸಲಾಗಿಲ್ಲ. ಇದು 56ನೇ ಅಧ್ಯಾಯವಾಗಿರುವುದರಿಂದ ಅವರ ಹೆಸರು ಇಲ್ಲಿದೆ” ಎಂದು ಲೇವಡಿ ಮಾಡಿದ್ದಾರೆ.

‘ದಿ ರೆಬೆಲ್’ ಎಂಬ ಹೆಸರಿನ ಬಳಕೆದಾರರು, “ಇದು ನಿಜಕ್ಕೂ ಹಾಸ್ಯಾಸ್ಪದವಾಗಿದೆ! ಪುಸ್ತಕದ ಸ್ವಾತಂತ್ರ್ಯ ಹೋರಾಟಗಾರರ ಅಧ್ಯಾಯದಲ್ಲಿ ಇದ್ದಕ್ಕಿದ್ದಂತೆ ನರೇಂದ್ರ ಮೋದಿ ಪ್ರತ್ಯಕ್ಷರಾಗುತ್ತಾರೆ! ಭಗತ್ ಸಿಂಗ್, ಆಝಾದ್, ಬೋಸ್… ಮತ್ತು ಈಗ ತಮ್ಮ ಸಂಪೂರ್ಣ ಘೋಷಣೆಗಳ ಪಟ್ಟಿಯೊಂದಿಗೆ ಮೋದಿ! ‘ಸಬ್ಬಾ ಸಾಥ್, ‘ಅಚ್ಚೇ ದಿನ್’, ‘ಮೇಕ್ ಇನ್ ಇಂಡಿಯಾ’ ಎಲ್ಲವನ್ನೂ ಸ್ವಾತಂತ್ರ್ಯ ಹೋರಾಟದ ಅಧ್ಯಾಯದಲ್ಲೇ ತುರುಕಲಾಗಿದೆ! ಅವರು ಯಾವಾಗಿನಿಂದ ಸ್ವಾತಂತ್ರ್ಯ ಹೋರಾಟಗಾರರಾದರು? ಸ್ವಾತಂತ್ರ್ಯದ ಬಳಿಕ ಜನಿಸಿದ ವ್ಯಕ್ತಿಯೊಬ್ಬರು ತಮ್ಮನ್ನು ತಾವೇ ಸೇರಿಸಿಕೊಳ್ಳುವಂತೆ ಪಠ್ಯಪುಸ್ತಕದ ಇತಿಹಾಸವನ್ನೇ ಮತ್ತೆ ಬರೆಯಲಾಗುತ್ತಿದೆಯೇ? ಇತಿಹಾಸದ ಮೇಲೂ ಜುಮ್ಹಾ!” ಎಂದು ಟೀಕಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *