Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರಿನ ಮಾಂಡ್ ಸೊಭಾಣ್ ಸಂಸ್ಥೆಯಿಂದ ಹೊಸ ಗಿನ್ನೆಸ್ ವಿಶ್ವದಾಖಲೆ.

Spread the love

ಮಂಗಳೂರು :12 ದಿನ, 12 ಗಂಟೆ, 11 ನಿಮಿಷ..! ಅತೀ ದೀರ್ಘ ಸಮೂಹ ಗಾಯನದಲ್ಲಿ ಮಾಂಡ್‌ ಸೊಭಾಣ್‌ ಸಂಸ್ಥೆಯಿಂದ ಗಿನ್ನೆಸ್‌ ವಿಶ್ವದಾಖಲೆ, ಮಂಗಳೂರಿಗೆ ಮತ್ತೊಂದು ಕೀರ್ತಿಮಂಗಳೂರು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ನಗರದ ಪುರಭವನದಲ್ಲಿ ಮಾಂಡ್ ಸೊಭಾಣ್ ನೇತೃತ್ವದಲ್ಲಿ ಆಯೋಜಿಸಿದ ಅತೀ ದೀರ್ಘಾವಧಿಯ ಸಮೂಹ ಗಾಯನವು ನ.15ರ ಸಂಜೆ 6.12 ಗಂಟೆಗೆ ಹನ್ನೆರಡು ದಿನ, ಹನ್ನೆರಡು ಗಂಟೆ ಹಾಗೂ ಹನ್ನೆರಡು ನಿಮಿಷಗಳನ್ನ ಪೂರ್ಣಗೊಳಿಸುವುದರೊಂದಿಗೆ ಹೊಸ ಗಿನ್ನೆಸ್‌ ವಿಶ್ವದಾಖಲೆ ಪಟ್ಟಿಯಲ್ಲಿ ಸಾಧನೆ ಬರೆದಿದೆ.ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಇತರ ಸಂಘಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ಗುಜರಾತಿನ ವಡ್ತಾಲ್‌ನಲ್ಲಿ ಶ್ರೀ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಶನಿವಾರ ಸಂಜೆ ಮೀರಿಸಿದ್ದು ಇದೀಗ ಒಂದು ದಿನ ಹೆಚ್ಚುವರಿ ಸಾಧನೆಯೊಂದಿಗೆ ಮಾಂಡ್ ಸೊಭಾಣ್ ತನ್ನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸಾಧಿಸಿದೆ.ಮಾಂಡ್ ಸೊಭಾಣ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ದಿವಂಗತ ಸಂಸ್ಥಾಪಕ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಭಾಗವಾಗಿ ಈ ಐತಿಹಾಸಿಕ ದಾಖಲೆಯ ಪ್ರಯತ್ನ ನಡೆದಿತ್ತು. ಈ ಮೂಲಕ ಮಾಂಡ್ ಸೊಭಾಣ್ ಮತ್ತೊಮ್ಮೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಭಾಗಗಳಲ್ಲಿ ನೆಲೆಸಿರುವ ಕೊಂಕಣಿ ಸಮುದಾಯವು ಹೊಸ ವಿಶ್ವದಾಖಲೆಯನ್ನ ಸ್ಥಾಪಿಸುವ ಮೂಲಕ ತನ್ನಲ್ಲಿನ ಒಗ್ಗಟ್ಟು, ಶಿಸ್ತು ಹಾಗೂ ಭಾಷಾ ಪ್ರೇಮಕ್ಕೆ ಸಾಕ್ಷಿಯಾಯಿತು.ದಾಖಲೆಯ ನಂತರವೂ ಗಾಯನ ಮುಂದುವರೆದಿದ್ದು, ಭಾನುವಾರ ಸಂಜೆ 5 ಗಂಟೆಗೆ ‘ಟೀಮ್ ಸುಮೇಲ್’ ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬಿದ್ದಿದೆ. ಅಲ್ಲದೆ, ಮಂಗಳೂರಿನಲ್ಲಿ ಮತ್ತೊಂದು ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆಯೂ ಸೇರಿಕೊಂಡಿದೆ.ಮ್ಯಾರಥಾನ್ ಗಾಯನ (ಬಹು ಗಾಯಕರು)’ ವಿಭಾಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಂಡ್ ಸೊಭಾಣ್‌ ಸಂಸ್ಥೆಯ ಐತಿಹಾಸಿಕ ಸಾಧನೆಯನ್ನು ಮಂಗಳೂರಿನಲ್ಲಿ ಅದ್ಧೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು. ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ದಂಪತಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಂಡ್ ಸೊಭಾಣ್‌ ಅಧ್ಯಕ್ಷ ಲುವಿ ಜೆ. ಪಿಂಟೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ವಾನಿ ಅಲ್ವಾರಿಸ್ ಹಾಗೂ ರಾಯ್ ಕ್ಯಾಸ್ಟೆಲಿನೊ ಸೇರಿದಂತೆ ಕೊಂಕಣಿ ಸಂಸ್ಕೃತಿಯ ಹಲವು ಗಣ್ಯರು ಸಾಕ್ಷಿಯಾದರು.


Spread the love
Share:

administrator

Leave a Reply

Your email address will not be published. Required fields are marked *