Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸದಿಲ್ಲಿ: ಪಾಕ್ ಎಫ್-16 ವಿಮಾನ ಹೊಡೆದುರುಳಿಸಿದ್ದ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಈಗ FLY91 ಪೈಲಟ್!

Spread the love

ಹೊಸದಿಲ್ಲಿ: 2019ರಲ್ಲಿ ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ (IAF) ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರು ಖಾಸಗಿ ವಿಮಾನಯಾನ ಸಂಸ್ಥೆ FLY91ಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
43 ವರ್ಷದ ಅಭಿನಂದನ್ ಅವರು ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿದ್ದರು. ಕಳೆದ ತಿಂಗಳು FLY91ಗೆ ಪೈಲಟ್ ಆಗಿ ಸೇರಿದ್ದಾರೆ ಎಂದು ಮೂಲಗಳು PTIಗೆ ತಿಳಿಸಿವೆ.
ಆದರೆ, FLY91ನಲ್ಲಿ ಅಭಿನಂದನ್ ಅವರ ಹುದ್ದೆ ಏನು ಅಥವಾ ಅವರ ಹಾರಾಟದ ಜವಾಬ್ದಾರಿಗಳು ಯಾವುವು ಎಂಬುದು ತಿಳಿದುಬಂದಿಲ್ಲ. ಉದ್ಯೋಗಿಗಳ ವೈಯಕ್ತಿಕ ಮಾಹಿತಿಯು ಖಾಸಗಿ ವಿಷಯವಾಗಿರುವುದರಿಂದ ಈ ಕುರಿತು ಪ್ರತಿಕ್ರಿಯಿಸಲು FLY91 ವಕ್ತಾರರು ನಿರಾಕರಿಸಿದ್ದಾರೆ.

ವೈಮಾನಿಕ ಕಾಳಗ
2019ರ ಫೆಬ್ರುವರಿ 26ರಂದು ಭಾರತವು ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು. ಇದರ ಮರುದಿನ, ಫೆಬ್ರವರಿ 27ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದಾಗ ಉಭಯ ದೇಶಗಳ ಯುದ್ಧವಿಮಾನಗಳ ನಡುವೆ ವೈಮಾನಿಕ ಕಾಳಗ ನಡೆದಿತ್ತು. ಈ ಕಾಳಗದ ವೇಳೆ ಅಭಿನಂದನ್ ಅವರು ಹಾರಿಸುತ್ತಿದ್ದ MIG-21 ಬೈಸನ್ ಯುದ್ಧವಿಮಾನವನ್ನು ಪಾಕಿಸ್ತಾನದ ಪಡೆಗಳು ಹೊಡೆದುರುಳಿಸಿದ್ದವು. ವಿಮಾನದಿಂದ ಪ್ಯಾರಾಚೂಟ್ ಮೂಲಕ ಜಿಗಿದ ಅಭಿನಂದನ್ ಅವರು ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಇಳಿದಿದ್ದರು.

ಅದೇ ವೈಮಾನಿಕ ಕಾಳಗದಲ್ಲಿ ಅಭಿನಂದನ್ ಅವರು ಪಾಕಿಸ್ತಾನದ F-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು ಎಂದು ಭಾರತ ಹೇಳಿತ್ತು. ಬಳಿಕ ಪಾಕಿಸ್ತಾನ ಪಡೆಗಳು ಅಭಿನಂದನ್ ಅವರನ್ನು ಸೆರೆಹಿಡಿದು ಮೂರು ದಿನಗಳ ಕಾಲ ವಶದಲ್ಲಿಟ್ಟಿದ್ದವು.
F-16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಏಕೈಕ MiG-21 ಪೈಲಟ್ ಎಂಬ ಹೆಗ್ಗಳಿಕೆಗೆ ಅಭಿನಂದನ್ ಪಾತ್ರರಾಗಿದ್ದಾರೆ. ವೈಮಾನಿಕ ಕಾಳಗದ ವೇಳೆ ‘ಅಸಾಧಾರಣ ಕರ್ತವ್ಯ ಪ್ರಜ್ಞೆ’ ಪ್ರದರ್ಶಿಸಿದ್ದಕ್ಕಾಗಿ ಅವರಿಗೆ 2021ರಲ್ಲಿ ಭಾರತದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ವೀರ ಚಕ್ರವನ್ನು ನೀಡಲಾಗಿತ್ತು.

ಸಂಖ್ಯೆಯಲ್ಲಿ ಹೆಚ್ಚಿನ ಪಾಕಿಸ್ತಾನದ ಯುದ್ಧವಿಮಾನಗಳನ್ನು ಎದುರಿಸಿದ ಸಂದರ್ಭದಲ್ಲೂ ಅಭಿನಂದನ್ ತೋರಿದ ಧೈರ್ಯ ಮತ್ತು ಸಾಹಸವನ್ನು ವೀರ ಚಕ್ರ ಪ್ರಶಸ್ತಿಯ ಉಲ್ಲೇಖದಲ್ಲಿ ಶ್ಲಾಘಿಸಲಾಗಿತ್ತು.
2019ರ ವೈಮಾನಿಕ ಕಾಳಗದ ಸಂದರ್ಭದಲ್ಲಿ ಅಭಿನಂದನ್ ಅವರು ವಿಂಗ್ ಕಮಾಂಡರ್ ಆಗಿದ್ದರು. ಬಳಿಕ ಭಾರತೀಯ ವಾಯುಪಡೆಯು ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತ್ತು.
FLY91
FLY91 ವಿಮಾನಯಾನ ಸಂಸ್ಥೆಯು 2024ರ ಮಾರ್ಚ್ ನಲ್ಲಿ ವಾಣಿಜ್ಯ ವಿಮಾನ ಹಾರಾಟ ಆರಂಭಿಸಿತು. ಸದ್ಯ ಸಂಸ್ಥೆಯು ಆರು ATR 72-600 ವಿಮಾನಗಳನ್ನು ಹೊಂದಿದೆ. ಗೋವಾ ಮತ್ತು ಹೈದರಾಬಾದ್ ನಲ್ಲಿ FLY91 ತನ್ನ ಕಾರ್ಯಾಚರಣಾ ನೆಲೆಗಳನ್ನು ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *