Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಹಾಗೂ ವಿಮಾನ ಇಂಧನ (ATF) ದರ ಭಾರಿ ಏರಿಕೆ – ಗೃಹಬಳಕೆ ಗ್ರಾಹಕರಿಗೆ ನಿರಾಳ!

Spread the love

ನವದೆಹಲಿ : ಪ್ರತಿ ತಿಂಗಳ ಮೊದಲ ದಿನದ ಇಂಧನ ದರ ಪರಿಷ್ಕರಣೆಯಂತೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್ ಹಾಗೂ ವಿಮಾನ ಇಂಧನ (ATF) ದರವನ್ನು ಹೆಚ್ಚಿಸಿ ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿವೆ. ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‌ಗೆ ₹62.59 ರಷ್ಟು ಏರಿಕೆ ಮಾಡಲಾಗಿದೆ. ಆದರೆ, ಸಾಮಾನ್ಯ ಮನೆಗಳಲ್ಲಿ ಬಳಸುವ ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಳೆದ ಸೆಪ್ಟೆಂಬರ್‌ನಲ್ಲೂ ₹9.50 ರಷ್ಟು ಏರಿಕೆಯಾಗಿತ್ತು. ಅದಕ್ಕೂ ಮುನ್ನ ಜುಲೈನಲ್ಲಿ ₹183.50 ಹಾಗೂ ಆಗಸ್ಟ್‌ನಲ್ಲಿ ₹192 ರಷ್ಟು ಇಳಿಕೆಯಾಗಿ ಕೊಂಚ ಸಮಾಧಾನ ತಂದಿತ್ತು. ಫೆಬ್ರವರಿಯಿಂದ ಜೂನ್ ನಡುವಿನ ಅವಧಿಯಲ್ಲಿ ಈ ಸಿಲಿಂಡರ್ ದರವು ₹1,740.50 ರಿಂದ ದಾಖಲೆಯ ₹3,113.50 ಕ್ಕೆ ಜಿಗಿದಿತ್ತು.ಅಂತರರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ದರಗಳು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತವನ್ನು ಆಧರಿಸಿ ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಈ ದರ ಪರಿಷ್ಕರಣೆ ಮಾಡುತ್ತವೆ. ಸ್ಥಳೀಯ ತೆರಿಗೆ ಮತ್ತು ವ್ಯಾಟ್ (VAT) ಆಧಾರದ ಮೇಲೆ ಆಯಾ ರಾಜ್ಯಗಳಲ್ಲಿ ಮಾರಾಟ ದರ ವ್ಯತ್ಯಾಸವಿರುತ್ತದೆ. ಹೋಟೆಲ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, ಮನೆಗಳಲ್ಲಿ ಬಳಸುವ 14.2 ಕೆ.ಜಿ. ತೂಕದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರ ಬೆಲೆ ಹಳೆಯ ₹942 ರಲ್ಲೇ ಮುಂದುವರಿದಿದೆ. ಪಶ್ಚಿಮ ಏಷ್ಯಾದ ಯುದ್ಧ ಬಿಕ್ಕಟ್ಟಿನಿಂದಾಗಿ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಗೃಹಬಳಕೆ ಸಿಲಿಂಡರ್ ದರ ₹89 ರಷ್ಟು ಏರಿಕೆಯಾಗಿತ್ತು.ಮತ್ತೊಂದೆಡೆ, ಕಳೆದ ಮೇ ತಿಂಗಳಲ್ಲಿ ಲೀಟರ್‌ಗೆ ಸುಮಾರು ₹7.50 ರಷ್ಟು ಹೆಚ್ಚಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳಲ್ಲೂ ಈ ಬಾರಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿರುವ ಬೆನ್ನಲ್ಲೇ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪೂರೈಸುವ ವಿಮಾನ ಇಂಧನದ (ATF) ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ಗೆ ₹16 ರಷ್ಟು ಹೆಚ್ಚಿಸಲಾಗಿದ್ದು, ಹೊಸ ದರ ₹137 ಕ್ಕೆ ತಲುಪಿದೆ. ಈ ಹಿಂದೆ ಇದರ ಬೆಲೆ ಲೀಟರ್‌ಗೆ ₹121 ಇತ್ತು. ಇಂಧನ ಬೆಲೆ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ವಿಮಾನ ಪ್ರಯಾಣ ದರ ಕೂಡ ದುಬಾರಿಯಾಗುವ ಸಾಧ್ಯತೆಯಿದೆ.


Spread the love
Share:

administrator

Leave a Reply

Your email address will not be published. Required fields are marked *