Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕನ್ನಡಿ ಮುಂದೆ ನಿಂತು ತನ್ನನ್ನೇ ನೋಡಿ ಫಿದಾ ಆದ ಮಂಗ: ಕ್ಷೌರಿಕನ ಪ್ರೀತಿಗೆ ಮನಸೋತ ಪ್ರಾಣಿ

Spread the love

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿನ ದೇವರಾಜ್ ಎಂಬುವವರ ಸಲೂನ್‌ಗೆ ಮಂಗವೊಂದು ಬಂದು, ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ದಿನನಿತ್ಯ ಸಲೂನ್ ಬಳಿ ಬರುತ್ತಿದ್ದ ಈ ಮಂಗ, ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿತ್ತು. ಎಷ್ಟೇ ಗದರಿಸಿದರೂ ಕ್ಷೌರಿಕನ ಕೆಲಸ ಮುಗಿಯುವ ವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ಮಂಗನ ಈ ನಡೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಪ್ರೀತಿಯಿಂದ ಅದರ ತಲೆ ಬಾಚಿದ್ದಾರೆ. ಬಳಿಕ ಕೇಶ ವಿನ್ಯಾಸ ಮಾಡುವಂತೆ ನಟಿಸಿ ತಲೆ ಬಾಚಿದಾಗ, ಮಂಗ ಯಾವುದೇ ಗಲಾಟೆ ಮಾಡದೆ ಗಂಭೀರವಾಗಿ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *