Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರಿನಲ್ಲಿ ನಿರ್ಮಾಣ ಹಂತದ ಸೇತುವೆಯಲ್ಲಿ ಅವಘಡ; ಮೀನುಗಾರಿಕಾ ಬೋಟ್ ಜಖಂ, ಇಬ್ಬರು ಕಾರ್ಮಿಕರಿಗೆ ಗಾಯ

Spread the love

ಮಂಗಳೂರು: ಬೋಳೂರು ಮೀನುಗಾರಿಕಾ ದಕ್ಕೆಯಿಂದ ತಣ್ಣೀರುಬಾವಿ–ಬೆಂಗ್ರೆ ಕಡೆಗೆ ಸಂಪರ್ಕ ಕಲ್ಪಿಸಲು ನಿರ್ಮಾಣಗೊಳ್ಳುತ್ತಿರುವ ಸೇತುವೆಯ ಕಾಮಗಾರಿ ವೇಳೆ ಪಿಲ್ಲರ್‌ಗೆ ಜೋಡಿಸುತ್ತಿದ್ದ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಆಯತಪ್ಪಿ ನದಿಗೆ ಬಿದ್ದ ಘಟನೆ ಶುಕ್ರವಾರ (ನ. 27) ನಡೆದಿದೆ. ಘಟನೆಯಲ್ಲಿ ಕೆಳಗೆ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಜಖಂಗೊಂಡಿದ್ದು, ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಸೇತುವೆಗಾಗಿ ನಿರ್ಮಿಸಲಾದ ಪಿಲ್ಲರ್‌ಗಳ ಮೇಲ್ಭಾಗಕ್ಕೆ ಕ್ರೇನ್ ಮೂಲಕ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುವ ಕಾರ್ಯ ಭರದಿಂದ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿದ ಸ್ಲ್ಯಾಬ್, ಕ್ರೇನ್ ಸಮೇತ ನದಿ ನೀರಿಗೆ ಉರುಳಿಬಿದ್ದಿದೆ.

ಸ್ಲ್ಯಾಬ್ ಬಿದ್ದ ರಭಸಕ್ಕೆ ಸೇತುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಹರೀಶ್ ಎಂಬುವವರಿಗೆ ಸೇರಿದ ಮೀನುಗಾರಿಕಾ ಬೋಟ್ ಜಖಂಗೊಂಡಿದೆ. ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಬೋಟ್‌ನೊಳಗೆ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಾಪಾಯ ತಪ್ಪಿದೆ. ಅಪಘಾತದಲ್ಲಿ ಸ್ಥಳದಲ್ಲಿದ್ದ ಇಬ್ಬರು ಕ್ರೇನ್ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೋಳೂರು ಕಡೆಯಿಂದ ಬೆಂಗ್ರೆ ಹಾಗೂ ತಣ್ಣೀರುಬಾವಿಗೆ ನೇರ ವಾಹನ ಸಂಚಾರ ಕಲ್ಪಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಸೇತುವೆ ಪೂರ್ಣಗೊಂಡರೆ, ನಗರದಿಂದ ತಣ್ಣೀರುಬಾವಿಗೆ ಕುಳೂರು ಮೂಲಕ ಸುತ್ತಿಬಳಸಿ ಸಾಗುವ ಅನಿವಾರ್ಯತೆ ತಪ್ಪಲಿದೆ. ಮುಂಬರುವ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು; ಆದರೆ, ಈ ಅವಘಡದಿಂದ ಕಾಮಗಾರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.


Spread the love
Share:

administrator

Leave a Reply

Your email address will not be published. Required fields are marked *