Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೇಟ್ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮೀರಾಬಾಯಿ ಚಾನು!

Spread the love

ಗ್ಲಾಸ್ಕೊ: ಸ್ಕಾಟೆಂಡ್ ನ ಗ್ಲಾಸ್ಕೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್‌ 49 ಕೆಜಿ ವಿಭಾಗದಲ್ಲಿ ರವಿವಾರ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಜೊತೆಗೆ, ಸ್ನಾಚ್ ವಿಭಾಗದಲ್ಲಿ 85 ಕೆಜಿ ಎತ್ತುವ ಮೂಲಕ ನೂತನ ಕೂಟ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಇದು ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಅವರ ಸತತ ಮೂರನೇ ಚಿನ್ನದ ಪದಕವಾಗಿದೆ. ಅವರು 2018 ಮತ್ತು 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದರು. ಗ್ಲಾಸ್ಕೊದಲ್ಲಿ 31 ವರ್ಷದ ಚಾನು ಅವರ ಸ್ಪರ್ಧೆ ಅಡೆತಡೆಗಳಿಂದ ಮುಕ್ತವಾಗಿರಲಿಲ್ಲ. ಸ್ನಾಚ್ ನಲ್ಲಿ ಮೊದಲ ಪ್ರಯತ್ನದಲ್ಲಿ 82 ಕೆಜಿ ಎತ್ತಲು ಅವರು ವಿಫಲರಾದರು.
ಆದರೆ, ಎರಡನೇ ಪ್ರಯತ್ನದಲ್ಲಿ ಅವರು 82 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 85 ಕೆಜಿ ಎತ್ತಿದರು. ಬಳಿಕ, ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 105 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಆ ಮೂಲಕ ಅವರು ಚಿನ್ನದ ಪದಕವನ್ನು ಖಾತರಿಪಡಿಸಿದರು.
ನೈಜೀರಿಯಾದ ರುತ್ ಅಸುಕೊ ನಯೋಂಗ್ ಬೆಳ್ಳಿ ಗೆದ್ದರೆ, ಮಲೇಶ್ಯಾದ ಐರೀನ್ ಜೇನ್ ಹೆನ್ರಿ ಕಂಚಿನ ಪದಕ ಪಡೆದರು.


Spread the love
Share:

administrator

Leave a Reply

Your email address will not be published. Required fields are marked *