ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: ಲಷ್ಕರ್ ಉಗ್ರ ಲತೀಫ್ ಭಟ್ ಹ*ತ್ಯೆ!

ಶ್ರೀನಗರ: ಕುಲ್ಗಾಮ್‌ನ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದ್ದ ಲಷ್ಕರ್ ಉಗ್ರ (Lashkar Terrorist) ಲತೀಫ್ ಭಟ್‌ನನ್ನು (Lateef Bhat) ಭದ್ರತಾ ಪಡೆಗಳು (Indian Army) ಝಂಗಲ್‌ಪೋರದ ಬಳಿ ಗುಂಡಿನ ದಾಳಿ (Encounter) ನಡೆಸಿ ಹತ್ಯೆಗೈದಿವೆ. ಉಗ್ರ ಭಟ್ ಹತ್ಯೆ ಈ ವರ್ಷದ ಅತಿದೊಡ್ಡ ಭದ್ರತಾ ಯಶಸ್ಸು ಎಂದು ಪರಿಗಣಿಸಲಾಗಿದೆ.

ಲತೀಫ್ 2025ರ ನ.18 ರಂದು ಉಗ್ರ ಸಂಘಟನೆಗೆ ಸೇರಿದ್ದ. ದಕ್ಷಿಣ ಕಾಶ್ಮೀರದಲ್ಲಿ ಕಣ್ಗಾವಲು ಕ್ಯಾಮೆರಾಗಳಲ್ಲಿ ಜಕೀರ್ ಅಹ್ಮದ್ ಗನೈ ಜೊತೆಗೆ ಚಲನವಲನಗಳು ಸೆರೆಯಾದಾಗ ಈತ ಮೊದಲು ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದ್ದ. ಇನ್ನೂ ಉಗ್ರನಾದ ಮೊದಲ ವರ್ಷದ ಆನಿವರ್ಸರಿ ಆಚರಿಸಬೇಕಿದ್ದ ಉಗ್ರ ಲತೀಫ್‌ನನ್ನು ಅದೇ ದಿನ (ನ.18/2026) ಭದ್ರತಾ ಪಡೆಗಳು ಬೇಟೆಯಾಡಿವೆ.
ನ.5 ರಂದು ಕಾಶ್ಮೀರ ವಲಯದ ಪೊಲೀಸ್ ಮುಖ್ಯಸ್ಥ ಸುಜಿತ್ ಕುಮಾರ್ ಅವರು ಲತೀಫ್ ಭಟ್‌ನನ್ನು ಕಣಿವೆಯ ಏಕೈಕ ಸಕ್ರಿಯ ಸ್ಥಳೀಯ ಉಗ್ರ ಎಂದು ಗುರುತಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ (ನ.11) ಈತ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದ್ದ. ಇದರಿಂದ ಈತನನ್ನು ಹತ್ತಿಕ್ಕಲೇ ಬೇಕು ಎಂದು ಪಣ ತೊಟ್ಟಿದ್ದ ಭದ್ರತಾ ಪಡೆಗಳು ನ.18 ರಂದು ಹತ್ಯೆಗೈದಿದ್ದವು
ಹತ್ಯೆಗೂ ಮುನ್ನ ಮಸೀದಿಯಲ್ಲಿ ಅಡಗಿದ್ದ ಈತನಿಗೆ ವಿಡಿಯೋ ಕರೆ ಮಾಡಿ ಶರಣಾಗುವಂತೆ ಸೂಚಿಸಲಾಗಿತ್ತು. ಆದರೂ ಈತ ಶರಣಾಗಲು ನಿರಾಕರಿಸಿದ್ದ. ಬಳಿಕ ಅಶ್ರುವಾಯು ಬಳಸಲಾಗಿತ್ತು. ಇದರಿಂದ ಮಸೀದಿ ಒಳಗೆ ಇರಲಾಗದೆ ಭಟ್ ಓಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತನನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದವು.
ʻಕ್ರೂರಿʼ ಎಂದು ಕರೆಯಲ್ಪಡುತ್ತಿದ್ದ ಭಟ್, ಕಣಿವೆಯಲ್ಲಿ (Jammu And Kashmir) ನಡೆದ ಸರಣಿ ದಾಳಿಗಳಲ್ಲಿ ಭಾಗಿಯಾಗಿದ್ದ. ಭದ್ರತಾ ಪಡೆಗಳಿಂದ ಹಲವು ಬಾರಿ ಈತ ತಪ್ಪಿಸಿಕೊಂಡಿದ್ದ. ಈತನ ಹತ್ಯೆಯನ್ನು ಭದ್ರತಾ ವಲಯದಲ್ಲಿ 2026ರ ಅತಿದೊಡ್ಡ ಯಶಸ್ಸು ಎಂದು ಕರೆಯಲಾಗಿದೆ