Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ 89 ರನ್‌ಗಳ ಬೃಹತ್ ಜಯ

Spread the love

ಅಹ್ಮದಾಬಾದ್: ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ (84 ರನ್, 53 ಎಸೆತ, 7 ಬೌಂಡರಿ, 4 ಸಿಕ್ಸರ್, ಶುಭಮನ್ ಗಿಲ್ (64 ರನ್, 37 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ವಿಕೆಟ್‌ಕೀಪರ್ ಜೋಸ್ ಬಟ್ಲರ್ (ಔಟಾಗದೆ 57, 27 ಎಸೆತ, 5 ಬೌಂಡರಿ, 4 ಸಿಕ್ಸರ್) ಅವರ ಅರ್ಧಶತಕಗಳ ಕೊಡುಗೆ, ಮುಹಮ್ಮದ್ ಸಿರಾಜ್ (3-26), ರಶೀದ್ ಖಾನ್ (3-18) ಹಾಗೂ ಕಾಗಿಸೊ ರಬಾಡ (3-32) ಅವರ ದಾಳಿಯ ನೆರವಿನಿಂದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 89 ರನ್‌ಗಳ ಅಂತರದಿಂದ ಮಣಿಸಿದೆ.

14ನೇ ಪಂದ್ಯದಲ್ಲಿ 9ನೇ ಗೆಲುವು ಪಡೆದಿರುವ ಗುಜರಾತ್ ತಂಡವು ಒಟ್ಟು 18 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಸಿಎಸ್‌ಕೆ 6 ಗೆಲುವು ಮತ್ತು 8 ಸೋಲಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.
ಗುರುವಾರ ನಡೆದ 66ನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 229 ರನ್ ಕಲೆ ಹಾಕಿತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಸಿಎಸ್‌ಕೆ ತಂಡವು 13.4 ಓವರ್‌ಗಳಲ್ಲಿ ಕೇವಲ 140 ರನ್ ಗಳಿಸಿ ಆಲೌಟಾಯಿತು.

ಸಿಎಸ್‌ಕೆ ತಂಡವು ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಸಂಜು ಸ್ಯಾಟ್ಸನ್ (0) ವಿಕೆಟ್ ಕಳೆದುಕೊಂಡಿತು. ನಾಯಕ ಋತುರಾಜ್ ಗಾಯಕ್ವಾಡ್ (16), ಉರ್ವಿಲ್ ಪಟೇಲ್ (0), ಮ್ಯಾಥ್ ಶಾರ್ಟ್ (24) ಹಾಗೂ ಕಾರ್ತಿಕ್ ಶರ್ಮಾ (19) ವಿಕೆಟ್ ಒಪ್ಪಿಸಿದಾಗ ಸಿಎಸ್‌ಕೆ 5 ವಿಕೆಟ್‌ಗಳ ನಷ್ಟಕ್ಕೆ 63 ರನ್ ಗಳಿಸಿತು.
ಆಗ ಆರನೇ ವಿಕೆಟ್‌ಗೆ 53 ರನ್ ಸೇರಿಸಿದ ಶಿವಂ ದುಬೆ (47 ರನ್, 17 ಎಸೆತ, 4 ಬೌಂಡರಿ, 4 ಸಿಕ್ಸರ್ ಹಾಗೂ ಬ್ರೆವಿಸ್ ತಂಡವನ್ನು ಆಧರಿಸಿದರು. ಇದು ಸಿಎಸ್‌ಕೆ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.

ಇನಿಂಗ್ಸ್ ಆರಂಭಿಸಿದ ಸುದರ್ಶನ್ ಹಾಗೂ ಗಿಲ್ 12.2 ಓವರ್‌ಗಳಲ್ಲಿ 125 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಗಿಲ್ ಅವರು ಜಾನ್ಸನ್‌ ಗೆ ಔಟಾದ ಬಳಿಕ ಜೊತೆಯಾದ ಸುದರ್ಶನ್ ಹಾಗೂ ಬಟ್ಲರ್ ಎರಡನೇ ವಿಕೆಟ್ ಗೆ 82 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಸುದರ್ಶನ್ ಹಾಗೂ ರಾಹುಲ್ ತೆವಾಟಿಯಾ (0) ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. ಅಗ್ರ ಸ್ಕೋರರ್ ಸುದರ್ಶನ್ ಅವರು ಅನ್ಸುಲ್ ಕಾಂಬೋಜ್ ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ರನೌಟಾದರು. ಬಟ್ಲರ್ ಹಾಗೂ ಸುಂದರ್ (7) ಗುಜರಾತ್ ತಂಡ 229 ರನ್ ಗಳಿಸುವಲ್ಲಿ ನೆರವಾದರು.

ಸಿಎಸ್‌ಕೆ ಪರ ಮುಕೇಶ್ ಚೌಧರಿ (1-36), ಅನ್ಸುಲ್ ಕಾಂಬೋಜ್ (1-56) ಹಾಗೂ ಸ್ಪೆನ್ಸರ್ ಜಾನ್ಸನ್ (1-47) ತಲಾ ಒಂದು ವಿಕೆಟ್ ಪಡೆದರು.
*ಸಂಕ್ಷಿಪ್ತ ಸ್ಕೋರ್
*ಗುಜರಾತ್ ಟೈಟಾನ್ಸ್: 20 ಓವರ್‌ಗಳಲ್ಲಿ 229/4
(ಸುದರ್ಶನ್ 84, ಶುಭಮನ್ ಗಿಲ್ 64, ಬಟ್ಲರ್ ಔಟಾಗದೆ 57, ಮುಕೇಶ್ ಚೌಧರಿ 1-36)
*ಸಿಎಸ್‌ಕೆ: 13.4 ಓವರ್‌ಗಳಲ್ಲಿ 140 ರನ್‌ಗೆ ಆಲೌಟ್
(ಶಿವಂ ದುಬೆ 47, ಮ್ಯಾಥ್ಯ ಶಾರ್ಟ್ 24, ಕಾರ್ತಿಕ್ ಶರ್ಮಾ 19, ಅಸ್ಕುಲ್ 19, ರಶೀದ್ ಖಾನ್ 3-18, ಮುಹಮ್ಮದ್ ಸಿರಾಜ್ 3-26, ಕಾಗಿಸೊ ರಬಾಡ 3-32)


Spread the love
Share:

administrator

Leave a Reply

Your email address will not be published. Required fields are marked *