ಮಂಗಳೂರು: ಕದ್ರಿ ಮಠದಲ್ಲಿ ಆಗಸ್ಟ್ 24 ರಿಂದ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ; ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮ!

ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಆಗಸ್ಟ್ 24 ರಿಂದ 28 ರವರೆಗೆ ದಿನಾಂಕ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞವು ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜೀ ಮಹಾರಾಜ್ ಇವರ ದಿವ್ಯ ಆಶೀರ್ವಾದದೊಂದಿಗೆ ನಡೆಯಲಿದೆ. ಈ ವರದಿಯನ್ನು ಪ್ರತಿಷ್ಠಾನ ಮತ್ತು ದ ಸಫ್ರಾನ್ ಫ್ರಂಟ್ ವತಿಯಿಂದ ಪ್ರಸ್ತುತಪಡಿಸಲಾಗಿದೆ.

ಲಕ್ಷ್ಮಿ ಎಂದರೆ ಸಂಪತ್ತಿನ ದೇವತೆ ಮತ್ತು ನಾರಾಯಣ ಎಂದರೆ ಸಮೃದ್ಧಿಯ ದೇವರು. ಪ್ರತಿ ಮನೆಯಲ್ಲಿ ಧನ ಸಂಪತ್ತು ವೃದ್ಧಿಸಿದರೆ ಜನರು ಸಂತೃಪ್ತಿ, ಸಮಾಧಾನ ಹಾಗೂ ನೆಮ್ಮದಿಯಿಂದ ಬದುಕಬಲ್ಲರು. ಕುಟುಂಬಗಳು ಸಮೃದ್ಧಿಗೊಂಡರೆ ಆ ಪರಿಸರ ಶಾಂತಿಯಿಂದ ಕೂಡಿರುತ್ತದೆ, ಪರಿಸರ ಶಾಂತಿಯಾದಲ್ಲಿ ನಾಡು ಅಭಿವೃದ್ಧಿಯಾಗುತ್ತದೆ ಮತ್ತು ನಾಡು ಅಭಿವೃದ್ಧಿಯಾದಲ್ಲಿ ಸಮೃದ್ಧ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ.
ಈ ಉದ್ದೇಶದಿಂದ ಬ್ರಹ್ಮಲೀನ ಶ್ರೀ ಜಗದಾಚಾರ್ಯ ಡಾ. ಸ್ವಾಮೀ ಅಖಿಲೇಶ್‌ಜೀ ಮಹಾರಾಜ್ (ಕೌಲ್‌ಕುಲ್) ಇವರ ಶಿಷ್ಯ ಪೂಜ್ಯ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಇವರ ಮಾರ್ಗದರ್ಶನದಲ್ಲಿ ಸಾತ್ವಿಕ ಬಂಧುಗಳು ಹಾಗೂ ಸಫ್ರಾನ್ ಫ್ರಂಟ್ ಕಾರ್ಯಕರ್ತರು ಒಂದುಗೂಡಿ ಈ ಪುಣ್ಯಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಈ ಲೋಕ ಕಲ್ಯಾಣಾರ್ಥ ಶ್ರೀ ಲಕ್ಷ್ಮೀನಾರಾಯಣ ಯಜ್ಞದ ಧಾರ್ಮಿಕ ಕಾರ್ಯದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಭಾಗವಹಿಸಬೇಕಾಗಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ ಸಮಿತಿ ಹಾಗೂ ದ ಸಫ್ರಾನ್ ಫ್ರಂಟ್ ವತಿಯಿಂದ ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.

ಲಕ್ಷ್ಮಿ ಎಂದರೆ ಸಂಪತ್ತಿನ ದೇವತೆ ಮತ್ತು ನಾರಾಯಣ ಎಂದರೆ ಸಮೃದ್ಧಿಯ ದೇವರು. ಪ್ರತಿ ಮನೆಯಲ್ಲಿ ಧನ ಸಂಪತ್ತು ವೃದ್ಧಿಸಿದರೆ ಜನರು ಸಂತೃಪ್ತಿ, ಸಮಾಧಾನ ಹಾಗೂ ನೆಮ್ಮದಿಯಿಂದ ಬದುಕಬಲ್ಲರು. ಕುಟುಂಬಗಳು ಸಮೃದ್ಧಿಗೊಂಡರೆ ಆ ಪರಿಸರ ಶಾಂತಿಯಿಂದ ಕೂಡಿರುತ್ತದೆ, ಪರಿಸರ ಶಾಂತಿಯಾದಲ್ಲಿ ನಾಡು ಅಭಿವೃದ್ಧಿಯಾಗುತ್ತದೆ ಮತ್ತು ನಾಡು ಅಭಿವೃದ್ಧಿಯಾದಲ್ಲಿ ಸಮೃದ್ಧ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ.

ಈ ಉದ್ದೇಶದಿಂದ ಬ್ರಹ್ಮಲೀನ ಶ್ರೀ ಜಗದಾಚಾರ್ಯ ಡಾ. ಸ್ವಾಮೀ ಅಖಿಲೇಶ್‌ಜೀ ಮಹಾರಾಜ್ (ಕೌಲ್‌ಕುಲ್) ಇವರ ಶಿಷ್ಯ ಪೂಜ್ಯ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ ಇವರ ಮಾರ್ಗದರ್ಶನದಲ್ಲಿ ಸಾತ್ವಿಕ ಬಂಧುಗಳು ಹಾಗೂ ಸಫ್ರಾನ್ ಫ್ರಂಟ್ ಕಾರ್ಯಕರ್ತರು ಒಂದುಗೂಡಿ ಈ ಪುಣ್ಯಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಈ ಲೋಕ ಕಲ್ಯಾಣಾರ್ಥ ಶ್ರೀ ಲಕ್ಷ್ಮೀನಾರಾಯಣ ಯಜ್ಞದ ಧಾರ್ಮಿಕ ಕಾರ್ಯದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಭಾಗವಹಿಸಬೇಕಾಗಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ ಸಮಿತಿ ಹಾಗೂ ದ ಸಫ್ರಾನ್ ಫ್ರಂಟ್ ವತಿಯಿಂದ ಕೋರಲಾಗಿದೆ.