ಮಂಗಳೂರು: ಎನ್ಎಚ್ 66ರ ಕೂಳೂರು-ಸುರತ್ಕಲ್ ರಸ್ತೆ ಸಂಪೂರ್ಣ ಹೊಂಡಮಯ; ವಾಹನ ಸವಾರರ ಪರದಾಟ!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಿಂದ ಸುರತ್ಕಲ್ವರೆಗಿನ ರಸ್ತೆ ಸಂಪೂರ್ಣವಾಗಿ ಹೊಂಡ-ಗುಂಡಿಮಯವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಬೈಕಂಪಾಡಿಯಿಂದ ಕೂಳೂರು ಸೇತುವೆ ಹಾಗೂ ಎನ್ಎಂಪಿಟಿ ಮುಂಭಾಗದ ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ಅವುಗಳ ಮುಂದೆ ಬ್ಯಾರಿಕೇಡ್ಗಳನ್ನು ಇಟ್ಟಿದ್ದಾರೆ. ಈ ಬ್ಯಾರಿಕೇಡ್ ಗಳಿಂದಾಗುವ ಸಮಸ್ಯೆ ಒಂದೆರಡಲ್ಲ. ನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. 2025ರಲ್ಲಿ 26 ಕೋಟಿ ರೂಪಾಯಿ ವೆಚ್ಚದಲ್ಲಿ ಸುರತ್ಕಲ್ನಿಂದ ಬಿ.ಸಿ. ರೋಡ್ವರೆಗೆ ಡಾಮರೀಕರಣ ನಡೆಸಲಾಗಿದ್ದರೂ, ರಸ್ತೆ ಮತ್ತೆ ಕಸದಂತಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಒಂದು ವರ್ಷವಷ್ಟೆಯೇ ಈ ರೋಡಿಗೆ ಗ್ಯಾರಂಟಿ ಭಾಗ್ಯ ಅನ್ನೋ ಪ್ರಶ್ನೆ ಮೂಡಿದೆ. ಯಾವುದಾದರೂ ಪ್ರಾಣಾಪಾಯ ಅಥವಾ ದೊಡ್ಡ ಅಪಘಾತ ಸಂಭವಿಸುವ ಮುನ್ನ ಹೆದ್ದಾರಿ ಪ್ರಾಧಿಕಾರ ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕಿದೆ.