ಲಿಪುಲೇಖ್ ಮೂಲಕ ಮಾನಸ ಸರೋವರ ಯಾತ್ರೆ: ಭಾರತದ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪ

ಕಂಡು: ಲಿಪುಲೇಕ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲು ಭಾರತ ಹಾಗೂ ಚೀನಾ ಯೋಜನೆ ರೂಪಿಸಿರುವ ಬಗ್ಗೆ ನೇಪಾಳದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ರಚನೆಯಾದ ಬಲೇನ್ ಶಾ ನೇತೃತ್ವದ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಆದರೆ ಭಾರತ ಈ ಆಕ್ಷೇಪವನ್ನು ತಳ್ಳಿಹಾಕಿದ್ದು, ಇದು ಸಮರ್ಥನೀಯವೂ ಅಲ್ಲ ಅಥವಾ ಐತಿಹಾಸಿಕ ಅಂಕಿ ಅಂಶ- ಪುರಾವೆ ಆಧಾರದಲ್ಲಿ ಕೈಗೊಂಡ ನಿರ್ಧಾರವೂ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಲಿಪು ಲೇಕ್ ಪಾಸ್ ವಿವಾದಾತ್ಮಕ ಪ್ರದೇಶವಾಗಿದ್ದು, ಭಾರತ ಹಾಗೂ ಚೀನಾ ಯಾತ್ರಾರ್ಥಿಗಳಿಗೆ ಈ ಮಾರ್ಗದುದ್ದಕ್ಕೂ ವ್ಯಾಪಾರ-ವಹಿವಾಟು ನಡೆಸುತ್ತಿರುವುದನ್ನು ನೇಪಾಳ ಆಕ್ಷೇಪಿಸುತ್ತಲೇ ಬಂದಿದೆ.
“ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆ ಮತ್ತು ಆತಂಕಗಳ ಗ್ಗೆ ಗಮನ ಸೆಳೆದಿದೆ. ಇದನ್ನು ಭಾರತ ಹಾಗೂ ಚೀನಾ ನೇಪಾಳದ ಪ್ರದೇಶವಾದ ಲಿಪುಲೇಕ್ ಮೂಲಕ ಕೈಗೊಳ್ಳುತ್ತಿದೆ” ಎಂದು ವಿದೇಶಾಂಗ ವ್ಯಹಾರಗಳ ಸಚಿವಾಲಯ ರವಿವಾರ ಹೇಳಿಕೆ ನೀಡಿದೆ.
ಈ ಬಗ್ಗೆ ನೇಪಾಳ ಸರ್ಕಾರದ ನಿರ್ಧಾರ ಸ್ಪಷ್ಟ. ಲಿಂಪಿಯಾಧುರ ಮತ್ತು ಮಹಾಕಾಳಿ ನದಿಯ ಪೂರ್ವದ ಕಾಲಾಪಾನಿ 1816ರಿಂದಲೇ ಸುಗಾಲಿ ಒಪ್ಪಂದದ ಅನ್ವಯ ನೇಪಾಳದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.
