Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಹಾರ ಅರಸಿ ನಾಡಿಗೆ ಬಂದ ಚಿರತೆ: ತೆಂಗಿನ ಮರವೇರಿದ ವಿಡಿಯೋ ವೈರಲ್!

Spread the love

ತುಮಕೂರು: ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಚಿರತೆಯೊಂದು ತೆಂಗಿನ ಮರ ವಿಶ್ರಾಂತಿ ಪಡೆಯುತ್ತಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.
ತುಮಕೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಚಿರತೆ ನಾಯಿಗಳು ಹಾಗೂ ಜನರ ಕೂಗಾಟದಿಂದ ಕಂಗೆಟ್ಟು ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವ ಮುನ್ನವೇ ಮರದಿಂದ ಜಿಗಿದು ಕಾಡಿನತ್ತ ಓಡಿ ಹೋಗಿದೆ.
ಚಿರತೆ ತೆಂಗಿನ ಮರ ಏರಿ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ತೆಂಗಿನ ಮರದ ಮೇಲೆ ಚಿರತೆ ಕಂಡ ಕೂಡಲೇ ಬೀದಿ ನಾಯಿಗಳು ಹಾಗೂ ಜನರು ಸುತ್ತುವರೆದಿದ್ದು, ಇದರಿಂದ ಗಾಬರಿಗೊಂಡ ಚಿರತೆ ಕೆಲ ಹೊತ್ತು ಮರದ ಮೇಲಿಂದಲೇ ತನ್ನ ಆಕ್ರೋಶ ಹೊರಹಾಕಿತು.ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಮುಂದಾದರಾದರೂ, ಅಷ್ಟರಲ್ಲೇ ಚಿರತೆ ಮರದಿಂದ ಜಿಗಿದು ಕಾಡಿನತ್ತ ಓಡಿ ಹೋಯಿತು.
ಚಿರತೆ ಕಂಡುಬಂದಾಗ ಜನರು ಅದರ ಸಮೀಪ ಹೋಗದೆ, ಅದಕ್ಕೆ ತೊಂದರೆ ನೀಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಸೂಚಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *