Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ-ಜಪಾನ್ ಮಹತ್ವದ ಒಪ್ಪಂದ: 10 ಟ್ರಿಲಿಯನ್ ಯೆನ್ ಹೂಡಿಕೆ ಗುರಿ; ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈತ್ರಿ

Spread the love

ಹೊಸದಿಲ್ಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಸನೆ ತಕೈಚಿ ನಿಯೋಗದೊಂದಿಗೆ ನಡೆದ ಭಾರತ-ಜಪಾನ್ ಶೃಂಗಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ಹತ್ತು ವರ್ಷಗಳಲ್ಲಿ ಜಪಾನ್ ನಿಂದ ಭಾರತಕ್ಕೆ 10 ಟ್ರಿಲಿಯನ್ ಯೆನ್ ಹೂಡಿಕೆಯನ್ನು ಆಕರ್ಷಿಸುವುದು ಮತ್ತು ಭಾರತದಲ್ಲಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಜಪಾನ್ ಪ್ರಧಾನಿಯ ಭೇಟಿಯು ಭಾರತ-ಜಪಾನ್ ವಿಶೇಷ ಕಾರ್ಯತಂತ್ರದ ಹಾಗೂ ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯದ ಆರಂಭ ಎಂದು ಹೇಳಿದ ಮೋದಿ, ಭಾರತ ಮತ್ತು ಜಪಾನ್ ತಮ್ಮ ಮೊದಲ ಜಂಟಿ ಅಭಿವೃದ್ಧಿ ಯೋಜನೆಯಾದ ಯುನಿಫೈಡ್ ಕಾಂಪ್ಲೆಕ್ಸ್‌ ರೇಡಿಯೋ ಆಂಟೆನಾ (UNICORN) ಯೋಜನೆಗೆ ಸಹಿ ಹಾಕಿವೆ ಎಂದು ಘೋಷಿಸಿದರು.

ನೌಕಾಪಡೆಯ ನೌಕಾ ರಹಸ್ಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿರುವ ಯುನಿಕಾರ್ನ್ ಸಹಭಾಗಿತ್ವದ ಕುರಿತು ಮಾತನಾಡಿದ ಅವರು, ಈ ಯೋಜನೆಯು ಉಭಯ ರಾಷ್ಟ್ರಗಳ ರಕ್ಷಣಾ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ತಿಳಿಸಿದರು.
ಜಪಾನ್ ತನ್ನ ರಕ್ಷಣಾ ಉತ್ಪನ್ನಗಳ ರಫ್ತನ ಮೇಲೆ ಸ್ವಯಂ ಹೇರಿಕೊಂಡಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಈ ಯೋಜನೆಯ ಅಂಗೀಕಾರವಾಗಿದೆ.
ಸೆಮಿಕಂಡಕ್ಟರ್ ಗಳು ಮತ್ತು ಪ್ರಮುಖ ಖನಿಜಗಳಂತಹ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಯ ಸ್ಥೆರ್ಯವನ್ನು ಹೆಚ್ಚಿಸಲು ಆರ್ಥಿಕ ಭದ್ರತೆಯ ಮಾರ್ಗಸೂಚಿಯನ್ನು ಉಭಯ ನಾಯಕರು ಅಂಗೀಕರಿಸಿದರು. ಜೊತೆಗೆ, 15 ವರ್ಷಗಳ ಹಿಂದಿನ ಭಾರತ-ಜಪಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA)ವನ್ನು ಮರುಪರಿಶೀಲಿಸಿ, ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಸಹ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಇಂಧನ ಭದ್ರತೆ, ಖನಿಜಗಳ ಅನ್ವೇಷಣೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಉಭಯ ದೇಶಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿದವು.
ಭಾರತ-ಜಪಾನ್ ನಡುವೆ ಮುಂದಿನ ತಲೆಮಾರಿನ ಸಂಚಾರ ಸಹಭಾಗಿತ್ವ ಚೌಕಟ್ಟನ್ನೂ ಸಿದ್ಧಪಡಿಸಲಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಯಶಸ್ಸನ್ನು ಈಗ ಹಡಗು ನಿರ್ಮಾಣ, ವಿಮಾನಯಾನ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿಯೂ ಪುನರಾವರ್ತಿಸುತ್ತೇವೆ. ನಮ್ಮ ಸಂಬಂಧದ ಅತಿದೊಡ್ಡ ಶಕ್ತಿ ಜನರ ನಡುವಿನ ಬಾಂಧವ್ಯವಾಗಿದೆ. ಪ್ರತಿಭೆ ವಿನಿಮಯ, ಉದ್ಯೋಗ ಚಲನಶೀಲತೆ, ಕೌಶಲ್ಯಾಭಿವೃದ್ಧಿ ಹಾಗೂ ತಾಂತ್ರಿಕ ತರಬೇತಿ ಕಾರ್ಯಕ್ರಮಗಳಿಗೆ ನಾವು ಇನ್ನಷ್ಟು ಅವಕಾಶಗಳನ್ನು ವಿಸ್ತರಿಸುತ್ತಿದ್ದೇವೆ,’ ಎಂದು ಮೋದಿ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *