Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಂದೇ ಭಾರತ್ ಸಂಚಾರಕ್ಕೆ ಕೆಪಿಟಿಸಿಎಲ್ ಗ್ರೀನ್ ಸಿಗ್ನಲ್: ಘಾಟ್ ರೈಲು ಮಾರ್ಗದ ವಿದ್ಯುತ್ ಕಾಮಗಾರಿ ಪೂರ್ಣ!

Spread the love

ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ಇದೀಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 100 ಗಿಗಾವ್ಯಾಟ್ (GW) ಹಸಿರು ವಿದ್ಯುತ್ ಸಂಗ್ರಹಣಾ ಯೋಜನೆಯಲ್ಲಿ ಕೈಜೋಡಿಸಿದೆ.

2034–35ರ ವೇಳೆಗೆ ರಾಷ್ಟ್ರೀಯ ಗ್ರಿಡ್‌ಗೆ 10 GW (ಒಟ್ಟು ಗುರಿಯ ಶೇ. 10ರಷ್ಟು) ಹಸಿರು ವಿದ್ಯುತ್ ಸಂಗ್ರಹಣಾ ಸಾಮರ್ಥ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ.

ಪಶ್ಚಿಮ ಘಟ್ಟದ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಪೂರ್ಣಗೊಳಿಸಿದೆ.

ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರಕ್ಕೆ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಕಲ್ಪಿಸುವುದು ಕಾಮಗಾರಿಯ ಮುಖ್ಯ ಉದ್ದೇಶವಾಗಿದೆ.

ವಿಶೇಷವಾಗಿ ಯಲಹಂಕ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಇದರಿಂದ ಅನುಕೂಲವಾಗಲಿದೆ. ಈ ರೈಲಿಗೆ ಪ್ರಧಾನಿ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ. ಹೊಸದಾಗಿ ವಿದ್ಯುದೀಕರಣಗೊಂಡ ಪಶ್ಚಿಮ ಘಟ್ಟದ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು ಇದಾಗಲಿದೆ.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಪಿಟಿಸಿಎಲ್, ರೈಲ್ವೆ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳು ಹಲವು ಸಭೆಗಳನ್ನು ನಡೆಸಿ ಪರಿಶೀಲನೆ ಕೈಗೊಂಡಿದ್ದರು. ವಿದ್ಯುತ್ ಪ್ರಸರಣ ಜಾಲದ ಬಲವರ್ಧನೆ, ಉಪಕೇಂದ್ರಗಳ ಸಾಮರ್ಥ್ಯ ಹೆಚ್ಚಳ ಮತ್ತು ರೈಲ್ವೆ ವಿದ್ಯುತ್ ಎಳೆತ ಉಪಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಿ ಹಂತ ಹಂತವಾಗಿ ಪೂರ್ಣಗೊಳಿಸಲಾಗಿದೆ.

ಕೆಪಿಟಿಸಿಎಲ್ ಅಧಿಕಾರಿಗಳ ಪ್ರಕಾರ, ನಿಗಮದ 12 ವಿದ್ಯುತ್ ಉಪಕೇಂದ್ರಗಳ ಮೂಲಕ ರೈಲ್ವೆಯ 12 ವಿದ್ಯುತ್ ಎಳೆತ ಉಪಕೇಂದ್ರಗಳಿಗೆ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೊಸ ಮೇಲ್ಮೈ ವಿದ್ಯುತ್ ಮಾರ್ಗಗಳು, ಭೂಗತ ಕೇಬಲ್‌ಗಳು, ಸ್ವಿಚಿಂಗ್ ಕೇಂದ್ರಗಳು ಹಾಗೂ ಮೇಲ್ಮಟ್ಟದ ಟ್ರಾನ್ಸ್‌ಫಾರ್ಮರ್‌ಗಳ ಸಾಮರ್ಥ್ಯ ಹೆಚ್ಚಳ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಹೊಸ ರೈಲು ಸಂಪರ್ಕದಿಂದ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೂ ಉತ್ತೇಜನ ದೊರೆಯಲಿದ್ದು, ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಘಟ್ಟದ ಸವಾಲಿನ ಭೌಗೋಳಿಕ ಪರಿಸ್ಥಿತಿಯಲ್ಲೂ ರೈಲು ಸಂಚಾರಕ್ಕೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಖಚಿತಪಡಿಸಲು ಪ್ರಸರಣ ಮೂಲಸೌಕರ್ಯವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ವಂದೇ ಭಾರತ್ ರೈಲು ಸಂಚಾರದ ವೇಳೆ ಕೆಪಿಟಿಸಿಎಲ್‌ನ ಪ್ರಮುಖ ಉಪಕೇಂದ್ರಗಳು ಮತ್ತು ಸಂಪರ್ಕ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಕಾಮಗಾರಿಗಳ ಪಟ್ಟಿಯಲ್ಲಿ ಸಿದ್ಧಾಪುರಕ್ಕೆ 4.5 ಕಿ.ಮೀ ಉದ್ದದ 66 ಕೆವಿ ವಿದ್ಯುತ್ ಪ್ರಸರಣ ಮಾರ್ಗ, ಸಕಲೇಶಪುರ ರೈಲ್ವೆ ವಿದ್ಯುತ್ ಎಳೆತ ಉಪಕೇಂದ್ರಕ್ಕೆ 220 ಕೆವಿ ಭೂಗತ ಮತ್ತು ಮೇಲ್ಮೈ ವಿದ್ಯುತ್ ಸಂಪರ್ಕ, ನೆರಲೆಕಟ್ಟೆಗೆ 2.76 ಕಿ.ಮೀ ಉದ್ದದ 220 ಕೆವಿ ಭೂಗತ ಕೇಬಲ್ ಅಳವಡಿಕೆ ಸೇರಿವೆ.

ಜೋಕಟ್ಟೆ, ಮುಲ್ಕಿ, ಬಾರ್ಕೂರು ಮತ್ತು ಸೇನಾಪುರದಲ್ಲಿ 110 ಕೆವಿ ವಿದ್ಯುತ್ ಪ್ರಸರಣ, ಲೈನ್ ಇನ್-ಲೈನ್ ಔಟ್ (ಎಲ್‌ಐಎಲ್‌ಒ) ಹಾಗೂ ಸ್ವಿಚಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಚೆಪಾಳ್ಯ ಮತ್ತು ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ 220/66 ಕೆವಿ ಟ್ರಾನ್ಸ್‌ಫಾರ್ಮರ್‌ಗಳ ಸಾಮರ್ಥ್ಯ ಹೆಚ್ಚಿಸಲಾಗಿದೆ. ಮುರುಡೇಶ್ವರ, ಕುಮಟಾ ಮತ್ತು ಕಾರವಾರ ರೈಲ್ವೆ ವಿದ್ಯುತ್ ಎಳೆತ ಉಪಕೇಂದ್ರಗಳಿಗೆ ವಿದ್ಯುತ್ ಪೂರೈಸಲು ಅಸ್ತಿತ್ವದಲ್ಲಿರುವ ಕೆಪಿಟಿಸಿಎಲ್ ಜಾಲವನ್ನೂ ಬಲಪಡಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *