Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಕೊಲ್ಲೂರು: ಪತ್ನಿಗೆ ಇಂಜೆಕ್ಷನ್ ಮೂಲಕ ವಿಷವಿಕ್ಕಿ ಕೊಲೆಗೆ ಯತ್ನಿಸಿದ್ದ ಪತಿ ಹಾಗೂ ಪ್ರೇಯಸಿ ಶವವಾಗಿ ಪತ್ತೆ – ಸೌಪರ್ಣಿಕಾ ನದಿ ತೀರದಲ್ಲಿ ನೇಣಿಗೆ ಶರಣು!”

Spread the love

ಕೊಲ್ಲೂರು : ಪತ್ನಿಗೆ ಇಂಜೆಕ್ಷನ್‌ ಮೂಲಕ ವಿಷ ನೀಡಿ ಕೊಲ್ಲಲು ಯತ್ನಿಸಿದ ಪ್ರಕರಣದ ಆರೋಪಿಗಳಾದ ಪತಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆ ಸೌಪರ್ಣಿಕಾ ನದಿ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿಹೊಳೆ ಗ್ರಾಮದ ಚಾರ್ಸಾಲಿನಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಮೃತರನ್ನು ಗೋಳಿಹೊಳೆ ಚಾರ್ಸಾಲಿನ ನಿವಾಸಿ, ಆಟೋ ರಿಕ್ಷಾ ಚಾಲಕ ವಿಠ್ಠಲ ನಾಯ್ಕ (35) ಹಾಗೂ ಜಡ್ಕಲ್‌ನ ನಿವಾಸಿ ಭವ್ಯಾ ನಾಯ್ಕ ಅಲಿಯಾಸ್‌ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.ಸುಮಾರು 20 ದಿನಗಳ ಹಿಂದೆ ವಿಠ್ಠಲ ನಾಯ್ಕ ತನ್ನ ಪತ್ನಿ ಶ್ಯಾಮಲಾ ಅವರಿಗೆ ಇಂಜೆಕ್ಷನ್ ಮೂಲಕ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ್ದನು. ಈ ಕೃತ್ಯಕ್ಕೆ ಭವ್ಯಾ ನಾಯ್ಕ ಸಾಥ್ ನೀಡಿದ್ದರೆನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಠ್ಠಲ ನಾಯ್ಕ ಮೊದಲ ಆರೋಪಿ (A1) ಹಾಗೂ ಭವ್ಯಾ ಎರಡನೇ ಆರೋಪಿಯಾಗಿದ್ದರು (A2). ವಿಷ ಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ಶ್ಯಾಮಲಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ಅವರು ವಾರದ ಹಿಂದೆಯಷ್ಟೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ವಿಠ್ಠಲ್‌ ನಾಯ್ಕ ಮತ್ತು ಶ್ಯಾಮಲಾ ದಂಪತಿಗೆ 10 ವರ್ಷದ ಪುತ್ರ ಹಾಗೂ 2 ತಿಂಗಳ ಹಸುಗೂಸಿದೆ. ಭವ್ಯಾ ಅವರ ಪತಿ ಈ ಹಿಂದೆಯೇ ಮೃತಪಟ್ಟಿದ್ದರು ಎನ್ನಲಾಗಿದೆ.ಕೊಲೆಯತ್ನ ಪ್ರಕರಣ ದಾಖಲಾದ ಬಳಿಕ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಇಬ್ಬರೂ ತಲೆಮರೆಸಿಕೊಂಡಿದ್ದರು. ಮಂಗಳವಾರ ಸೌಪರ್ಣಿಕಾ ನದಿ ಸಮೀಪದ ಗೋಳಿಹೊಳೆ ಚಾರ್ಸಾಲಿನ ಸುಸಜ್ಜಿತವಲ್ಲದ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಮೃತದೇಹಗಳ ಸ್ಥಿತಿಯನ್ನು ಗಮನಿಸಿದರೆ ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೈಂದೂರು ಪೊಲೀಸರು, ಅಪರಾಧ ಸ್ಥಳ ತನಿಖಾ (SOCO) ತಂಡ ಹಾಗೂ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love
Share:

administrator

Leave a Reply

Your email address will not be published. Required fields are marked *