ಮಕ್ಕಳನ್ನು ಅಪಹರಿಸಲು ಆಟೋ ಚಾಲಕನ ಯತ್ನ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ!

ನವದೆಹಲಿ: ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹುಷಾರ್, ಹೋಗುವಾಗ, ಮನೆಗೆ ಬರುವಾಗ ನೀವು ಅವರೊಂದಿಗಿದ್ದಿರೆ ಒಳಿತು. ಆಟೋ ಚಾಲಕನೊಬ್ಬ ಮಕ್ಕಳನ್ನು ಅಪಹರಿಸಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. @/rider_akhil.1 ಎಂಬುವವರು ಒಂದು ವಿಡಿಯೋವನ್ನು ಸೆರೆಹಿಡಿದಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ.
ಇ-ರಿಕ್ಷಾ ಚಾಲಕನೊಬ್ಬ ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾನೆ, ಆಟೋ ಚಾಲಕನನ್ನು ಬೈಕ್ ಸವಾರರು ಬೆನ್ನಟ್ಟಿದ್ದಾರೆ, ಆತ ವೇಗವಾಗಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮಕ್ಕಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಕೆಳಗೆ ಹಾರಿದ್ದಾರೆ. ರಸ್ತೆಯ ಮೇಲೆ ಬಿದ್ದರೂ ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
