Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಪು: ಹೆದ್ದಾರಿಯಲ್ಲೇ ಬಸ್ ನಿಲ್ಲಿಸಿ ಸಿಬ್ಬಂದಿ ತೀವ್ರ ವಾಗ್ವಾದ; ಸಮಯದ ವಿಚಾರಕ್ಕೆ ಪ್ರಯಾಣಿಕರ ಸಮ್ಮುಖದಲ್ಲೇ ಗಲಾಟೆ!

Spread the love

ಕಾಪು, ಎಕ್ಸ್‌ಪ್ರೆಸ್ ಬಸ್‌ಗಳ ಚಾಲಕರು ಬಸ್‌ಗಳನ್ನು ಏಕಾಏಕಿ ರಸ್ತೆಯಲ್ಲೇ ನಿಲ್ಲಿಸಿ, ಪರಸ್ಪರ ತೀವ್ರ ವಾಗ್ವಾದ ನಡೆಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸರ್ವಿಸ್ ರಸ್ತೆಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಎರಡು ಎಕ್ಸ್‌ಪ್ರೆಸ್ ಬಸ್‌ಗಳ ಚಾಲಕರು ರಸ್ತೆಯಲ್ಲೇ ಏಕಾಏಕಿ ಬಸ್‌ಗಳನ್ನು ನಿಲ್ಲಿಸಿ, ಪರಸ್ಪರ ತೀವ್ರ ವಾಗ್ವಾದ ನಡೆಸಿದರು. ಇದರಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಯಿತು.ಬಸ್‌ಗಳ ಸಮಯದ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಮೊದಲು ಬಸ್‌ನೊಳಗೇ ಚಾಲಕರು ಹಾಗೂ ನಿರ್ವಾಹಕರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಅವರು ಬಸ್‌ನಿಂದ ಕೆಳಗಿಳಿದು ಪ್ರಯಾಣಿಕರ ಸಮ್ಮುಖದಲ್ಲೇ ಪರಸ್ಪರ ವಾಗ್ವಾದ ಮುಂದುವರಿಸಿದರು.ಸ್ಥಳೀಯ ನಿವಾಸಿಗಳು ಹಾಗೂ ಆಟೊರಿಕ್ಷಾ ಚಾಲಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಜಗಳವಾಡುತ್ತಿದ್ದ ಬಸ್ ಸಿಬ್ಬಂದಿ ಸುಮಾರು 10 ನಿಮಿಷಗಳ ಕಾಲ ವಾಗ್ವಾದ ಮುಂದುವರಿಸಿದರು.ಕಾಪು ಸರ್ವಿಸ್ ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಬಸ್ ಸಿಬ್ಬಂದಿಯ ಇಂತಹ ಅಶಿಸ್ತಿನ ವರ್ತನೆ ಪದೇಪದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೇವಲ ಎರಡು ವಾರಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು.ಆದರೂ ಇಂತಹ ಘಟನೆ ಮರುಕಳಿಸಿರುವುದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಹಾಗೂ ಪ್ರಯಾಣಿಕರು, ಸಂಬಂಧಪಟ್ಟ ಅಧಿಕಾರಿಗಳು ಈ ಬಸ್ ಚಾಲಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *