Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೈಪುರ: ಮದ್ಯದ ಅಮಲಿನಲ್ಲಿ ಯುವತಿಯ ರಸ್ತೆ ಹೈಡ್ರಾಮಾ; ಕ್ಯಾಬ್ ಚಾಲಕನ ಮೇಲೆ ಹಲ್ಲೆ, ಸಾರ್ವಜನಿಕವಾಗಿ ರಂಪಾಟ!

Spread the love

ಜೈಪುರ : ರಾಜಸ್ಥಾನದ ಜೈಪುರದ ಪ್ರಸಿದ್ಧ ಮಾಳವೀಯ ನಗರದ ಗೌರವ್ ಟವರ್ (ಜಿಟಿ) ಎದುರು ಹಿಮಾಚಲ ಪ್ರದೇಶದ ಯುವತಿಯೊಬ್ಬಳು ಮದ್ಯದ ಮತ್ತಿನಲ್ಲಿ ಜಗಳ ತೆಗೆದು, ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಹಂಗಾಮಾ ಸೃಷ್ಟಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 9 ರಂದು ನಡೆದ ಈ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಜವಾಹರ್ ಸರ್ಕಲ್ ಹಾಗೂ ಮಾಳವೀಯ ನಗರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶದ ನಿವಾಸಿಯಾದ ಈ ಯುವತಿ ಜೂನ್ 8 ರಂದು ತನ್ನ ಸ್ನೇಹಿತರೊಂದಿಗೆ ಜೈಪುರಕ್ಕೆ ಪ್ರವಾಸಕ್ಕೆ ಬಂದಿದ್ದಳು. ಜೂನ್ 9 ರ ಮುಂಜಾನೆ ತಾವಿದ್ದ ಹೋಟೆಲ್‌ನಿಂದ ಸ್ನೇಹಿತರೊಂದಿಗೆ ಸೇರಿ ಕ್ಯಾಬ್‌ನಲ್ಲಿ ಲಾಂಗ್ ಡ್ರೈವ್‌ಗೆ ತೆರಳಿದ್ದಳು. ಈ ವೇಳೆ ಯುವತಿ ವಿಪರೀತ ಮದ್ಯಪಾನ ಮಾಡಿದ್ದಳು ಎನ್ನಲಾಗಿದೆ. ಮುಂಜಾನೆ 7 ಗಂಟೆಯ ಸುಮಾರಿಗೆ ಇವರೆಲ್ಲರೂ ಗೌರವ್ ಟವರ್ ತಲುಪಿದಾಗ, ಕ್ಯಾಬ್‌ನಿಂದ ಇಳಿದ ಯುವತಿ ಏಕಾಏಕಿ ಚಾಲಕನೊಂದಿಗೆ ಜಗಳ ತೆಗೆದಿದ್ದಾಳೆ. ಅಷ್ಟಕ್ಕೇ ನಿಲ್ಲದೆ ಕ್ಯಾಬ್‌ನ ಗಾಜನ್ನು ಒಡೆದು, ಚಾಲಕನ ಶರ್ಟ್ ಹರಿದು ಆತನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾಳೆ. ಭಯಭೀತರಾದ ಚಾಲಕ ಆಕೆಯನ್ನು ಕಾರಿಗೆ ಹತ್ತಿಸಲು ಪ್ರಯತ್ನಿಸಿದನಾದರೂ ಯುವತಿ ನಿರಂತರವಾಗಿ ನಿಂದಿಸಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಚಾಲಕ ಆಕೆಯನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾನೆ.

ಚಾಲಕ ಹೋದ ನಂತರವೂ ಯುವತಿಯ ಆಕ್ರೋಶ ಕಮ್ಮಿಯಾಗಿರಲಿಲ್ಲ. ಮದ್ಯದ ಅಮೂಲಕ ಸಂಪೂರ್ಣವಾಗಿ ಬೆತ್ತಲಾದ ಆಕೆ, ದೀರ್ಘಕಾಲದವರೆಗೆ ಸಾರ್ವಜನಿಕ ರಸ್ತೆಯಲ್ಲೇ ಕಿರುಚುತ್ತಾ ಹಂಗಾಮಾ ಸೃಷ್ಟಿಸಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಜೈಪುರ ಆಸ್ಪತ್ರೆಯ ‘ಅಪರಾಜಿತಾ ಕೇಂದ್ರ’ಕ್ಕೆ ದಾಖಲಿಸಿದ್ದಾರೆ. ಮರುದಿನ ಜೂನ್ 10 ರಂದು ಆಕೆಗೆ ಪ್ರಜ್ಞೆ ಬಂದ ನಂತರ ವಿಚಾರಣೆ ನಡೆಸಿದಾಗ, “ತನ್ನೊಂದಿಗೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ” ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೆ ವೈದ್ಯಕೀಯ ಪರೀಕ್ಷೆಗೆ (Medical Test) ಒಳಗಾಗಲು ಆಕೆ ನಿರಾಕರಿಸಿದ್ದಾಳೆ. ಬಳಿಕ ಜೂನ್ 10 ರಂದೇ ಆಕೆ ಹಿಮಾಚಲ ಪ್ರದೇಶಕ್ಕೆ ಮರಳಿದ್ದಾಳೆ. ಸದ್ಯ ವೈರಲ್ ಆಗಿರುವ ವಿಡಿಯೋ ಆಧರಿಸಿ ಪೊಲೀಸರು ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *