Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬರುಯಿಪುರ್ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಎನ್‌ಕೌಂಟರ್‌ನಲ್ಲಿ ಹತನಾದ ಮುಖ್ಯ ಆರೋಪಿ ಪ್ರಭಾಶ್ ಮಂಡಲ್!

Spread the love

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ್ ಎಂಬಲ್ಲಿ ನಡೆದ 12 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಶ್ ಮಂಡಲ್ ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಘಟನೆಯ ಮರುಸೃಷ್ಟಿಗಾಗಿ ಪೊಲೀಸರು ಅಪರಾಧದ ಸ್ಥಳಕ್ಕೆ ಆರೋಪಿ ಪ್ರಭಾಶ್ ಮಂಡಲ್ ನನ್ನು ಕರೆದೊಯ್ಯುವಾಗ ಆತ ಪೊಲೀಸರಿಂದ ಬಂದೂಕನ್ನು ಕಸಿದುಕೊಂಡು ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಂಡಲ್ ಪೊಲೀಸ್ ಸಿಬ್ಬಂದಿಯಿಂದ ರಿವಾಲ್ವರ್ ಕಸಿದು ಪೊಲೀಸರ ಮೇಲೆ ಗುಂಡು ಹಾರಿಸಿ ಪಲಾಯನ ಮಾಡಲು ಪ್ರಯತ್ನಿಸಿದನು. ಈ ವೇಳೆ ಪೊಲೀಸರ ಪ್ರತಿದಾಳಿಗೆ ಆತ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಬರುಯಿಪುರ್ ಆಸ್ಪತ್ರೆಗೆ ಕರೆದೊಯ್ತಲಾಗಿದೆ. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.ಜುಲೈ 4 ರಂದು ಬರುಯಿಪುರ್ ಎಂಬಲ್ಲಿ12 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಗೋಣಿಚೀಲವೊಂದರಲ್ಲಿ ತುಂಬಿಸಿಟ್ಟಿದ್ದ ಆಕೆಯ ಮೃತದೇಹವನ್ನು ಸುರ್ಜಯಪುರದಲ್ಲಿರುವ ಕೆರೆಯೊಂದರಿಂದ ರವಿವಾರ ವಶಪಡಿಸಿಕೊಳ್ಳಲಾಗಿತ್ತು. ಘಟನೆಯನ್ನು ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು.
ಬಳಿಕ ಪ್ರಭಾಶ್ ಮೊಂಡಲ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕುರಿತು ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ, ಉದ್ರಿಕ್ತ ಜನರ ಗುಂಪು ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದೆ. ಆತನನ್ನು ಇಂದ್ರಜಿತ್ ಮೊಂಡಲ್ ಎಂದು ಗುರುತಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *