Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭೀಕರ ದುರಂತ: ರೈಲು ಬೋಗಿಯ ಮೇಲೆ ಹತ್ತಿ ಸಾಹಸ ಮಾಡಲು ಹೋಗಿ ವ್ಯಕ್ತಿ ದಹನ!

Spread the love

ದರ್ಭಂಗ: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಬಿಟ್ಟಿದ್ದಾರೆ. ಸರಕು ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಯುವಕ ಬೋಗಿಯ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಜನರು ಮತ್ತು ಪ್ರಯಾಣಿಕರು, ಕೆಳಗಿಳಿಯಪ್ಪಾ, ಅಪಾಯವಿದೆ ಎಂದು ಪದೇ ಪದೇ ಕಿರುಚುತ್ತಾ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದನ್ನೂ ಲೆಕ್ಕಿಸದ ಯುವಕ ಬೋಗಿಯ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ.
ಯುವಕ ಬೋಗಿಯ ಮೇಲ್ಭಾಗದಲ್ಲಿ ನಿಂತು ತನ್ನ ಕೈಯನ್ನು ಅಪಾಯಕಾರಿಯಾಗಿ ಓವರ್‌ಹೆಡ್ ವಿದ್ಯುತ್ ಮಾರ್ಗದ (High-Voltage Line) ಹತ್ತಿರ ಕೊಂಡೊಯ್ದಿದ್ದಾನೆ. ಕೈ ತಂತಿಗೆ ತಗುಲಿದ ತಕ್ಷಣವೇ ದೊಡ್ಡ ಮಟ್ಟದ ಸ್ಫೋಟದಂತಹ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ಆಘಾತದ ತೀವ್ರತೆಗೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಈತ ಮಾನಸಿಕವಾಗಿ ಅಸ್ಥಿರವಾಗಿದ್ದನೇ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
 


Spread the love
Share:

administrator

Leave a Reply

Your email address will not be published. Required fields are marked *