Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಪ್ಪಿನ ಪ್ಯಾಕೆಟ್‌ಗಳ ಮೇಲೂ ಬರಲಿದೆ “ಆರೋಗ್ಯಕ್ಕೆ ಹಾನಿಕರ” ಎಚ್ಚರಿಕೆ ಸ್ಟಿಕ್ಕರ್: ರಾಜ್ಯ ಸರಕಾರ ಮಹತ್ವದ ಚಿಂತನೆ

Spread the love

ಬೆಂಗಳೂರು: ಕರ್ನಾಟಕದಲ್ಲಿ ಉಪ್ಪಿನ ಪ್ಯಾಕೆಟ್‌ಗಳ ಮೇಲೆ “ಆರೋಗ್ಯಕ್ಕೆ ಹಾನಿಕರ” ಎಂಬ ಎಚ್ಚರಿಕೆ ಸ್ಟಿಕ್ಕರ್‌ಗಳನ್ನು ಕಡ್ಡಾಯಗೊಳಿಸಲು ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇಡುತ್ತಿದೆ. ಮಧ್ಯದ ಬಾಟಲಿಗಳ ಮೇಲೆ ಇರುವಂತಹ ಎಚ್ಚರಿಕೆಗಳ ಮಾದರಿಯಲ್ಲೇ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ಉಪ್ಪು ಮತ್ತು ಸಕ್ಕರೆಯ ಅತಿಯಾದ ಸೇವನೆಯು ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗಿದೆ. ಹಿಂದೆ ಸರಕಾರದಿಂದ ಸಬ್ಸಿಡಿಯಲ್ಲಿ ಉಪ್ಪು-ಸಕ್ಕರೆ ವಿತರಿಸಲಾಗುತ್ತಿತ್ತು, ಆದರೆ ತಾನು ಆಹಾರ ಸಚಿವನಾಗಿದ್ದಾಗ ಅದನ್ನು ನಿಲ್ಲಿಸಿದ್ದೇನೆ ಎಂದು ಖಾದರ್ ಹೇಳಿದ್ದಾರೆ. ಜನರಿಗೆ ಉಪ್ಪಿನ ಸರಿಯಾದ ಬಳಕೆಯ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಉಪ್ಪಿನ ಉತ್ಪಾದನೆಗೆ ಒತ್ತು ನೀಡುವುದು ಈ ಕ್ರಮದ ಹಿಂದಿರುವ ಮುಖ್ಯ ಉದ್ದೇಶ ಎಂದವರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *