ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್: 5,000 ಮೀ. ಓಟದಲ್ಲಿ ಐತಿಹಾಸಿಕ ಕಂಚು ಗೆದ್ದ ಗುಲ್ವೇರ್ ಸಿಂಗ್!

ಗ್ಲಾಸ್ಕೊ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪುರುಷರ 5,000 ಮೀ. ಓಟದ ಫೈನಲ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅತ್ತೀಟ್ ಆಗಿರುವ ಗುಲ್ವೇರ್ ಸಿಂಗ್ ಇತಿಹಾಸ ನಿರ್ಮಿಸಿದರು.
ಗುಲ್ವಿರ್ ಅವರು ಒಂದೇ ಆವೃತ್ತಿಯ ಗೇಮ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಮೊದಲ ಭಾರತೀಯ ಟ್ಯಾಕ್ ಆ್ಯಂಡ್ ಫೀಲ್ಡ್ ಅತ್ತೀಟ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಜುಲೈ 28ರಂದು 10,000 ಮೀ.ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಹಾಲಿ ಏಶ್ಯನ್ ಚಾಂಪಿಯನ್ ಗುಲ್ವಿರ್ ಸಿಂಗ್ 5,000 ಮೀ. ಓಟದ ಫೈನಲ್ನಲ್ಲಿ 13:24.95 ಅವಧಿಯಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡರು.
ಅಥ್ಲೆಟಿಕ್ಸ್ ಸ್ಪರ್ಧಾವಳಿಯ ಕೊನೆಯ ದಿನವಾದ ಶನಿವಾರ ಕೀನ್ಯದ ಮ್ಯಾಥ್ಯ ಕಿಪ್ಪುಂಬಾ ಕಿಪ್ಪಾಂಗ್ 13:23.61 ಅವಧಿಯಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರೆ, ಈ ಮೊದಲು 10,000 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿದ್ದ ಆಸ್ಟ್ರೇಲಿಯದ ಕೀ ರಾಬಿನ್ಸನ್(13:24.70)ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
5,000 ಮೀ. ಹಾಗೂ 10,000 ಮೀ. ಎರಡರಲ್ಲೂ ರಾಷ್ಟ್ರೀಯ ದಾಖಲೆ ಹೊಂದಿರುವ 28ರ ವಯಸ್ಸಿನ ಗುಲ್ವಿರ್ ತನ್ನ ಈ ಋತುವಿನ ಶ್ರೇಷ್ಠ ಸಮಯ(13:03.93)ದಲ್ಲಿ ಗುರಿ ತಲುಪಲು ವಿಫಲರಾದರು. ಶನಿವಾರದ ಸ್ಪರ್ಧೆಯಲ್ಲಿ ಗುಲ್ಲೀರ್ ಅವರು ತನ್ನ ರಾಷ್ಟ್ರೀಯ ದಾಖಲೆ(12:59.77)ಗಿಂತಲೂ ನಿಧಾನವಾಗಿ ಗುರಿ ತಲುಪಿದ್ದಾರೆ.
ಕೀನ್ಯದ ಕಾರ್ನಿಲಿಯಸ್ ಕೆಂಬೊಯ್ ಅವರನ್ನು ಕೇವಲ 0.04 ಸೆಕೆಂಡ್ನಲ್ಲಿ ಹಿಂದಿಕ್ಕಿದ ಗುಲ್ವೇರ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಗುಲ್ಲೀರ್ 2023ರಲ್ಲಿ ಹಾಂಗೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ನಲ್ಲೂ 10,000 ಮೀ.ಓಟದಲ್ಲಿ ಕಂಚಿನ ಪದಕ ಜಯಿಸಿದ್ದರು.
