Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಯಾನ್ಸಿ ಬಾಕ್ಸಿಂಗ್ ಟೂರ್ನಿ: ಭಾರತೀಯ ಬಾಕ್ಸರ್‌ಗಳ ದರ್ಬಾರ್; 12 ಪದಕಗಳೊಂದಿಗೆ ಮಿಂಚಿದ ಕ್ರೀಡಾಪಟುಗಳು!

Spread the love

ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಬಾಕ್ಸರ್ ಗಳು ಝಕಿಯಾದಲ್ಲಿ ನಡೆದ ಆಹ್ವಾನಿತ 56ನೇ ಆವೃತ್ತಿಯ ಗ್ಯಾಸ್ಟ್ರಿ ಬಾಕ್ಸಿಂಗ್ ಟೂರ್ನಿಯಲ್ಲಿ 12 ಪದಕಗಳನ್ನು ಜಯಿಸಿ ಗಮನ ಸೆಳೆದರು.
ಐವರು ಸದಸ್ಯರ ಮಹಿಳೆಯರ ತಂಡವು ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಜಯಿಸಿದೆ. ಒಲಿಂಪಿಕ್ಸ್‌ ಪದಕ ವಿಜೇತೆ ಲವೀನಾ ಬೊರ್ಗೊಹೈನ್ (75 ಕೆಜಿ), ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಪ್ರೀತಿ ಪವಾರ್ (54 ಕೆಜಿ), ಸಾಕ್ಷಿ ಚೌಧರಿ (51 ಕೆಜಿ) ಹಾಗೂ ಪ್ರಿಯ ಘಂಘಾಸ್ (60 ಕೆಜಿ) ಸುಲಭ ಗೆಲುವು ದಾಖಲಿಸಿ ಚಿನ್ನದ ಪದಕ ಜಯಿಸಿದರು.
ಪ್ರವೀಣ್ ಹೂಡಾ (65 ಕೆಜಿ) ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು.
ಪುರುಷರ ತಂಡ ಕೂಡ ನಾಲ್ಕು ಚಿನ್ನದ ಪದಕ ಜಯಿಸಿ ಮಹಿಳೆಯರ ಸಾಧನೆಯನ್ನು ಸರಿಗಟ್ಟಿದೆ. ಜಾದುಮಣಿ ಸಿಂಗ್ (55 ಕೆಜಿ), ಸಚಿನ್ (60 ಕೆಜಿ), ಅಂಕುಶ್ (80 ಕೆಜಿ) ಹಾಗೂ ನರೇಂದರ್ (+90 ಕೆಜಿ) ತಮ್ಮ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಫೈನಲ್ ನಲ್ಲಿ ಎಡವಿದ ಆದಿತ್ಯ ಪ್ರತಾಪ್ ಯಾದವ್ (65 ಕೆಜಿ) ಹಾಗೂ ಕಪಿಲ್ ಪೊಖಾರಿಯ (90 ಕೆಜಿ) ಬೆಳ್ಳಿ ಪದಕ ಗೆದ್ದರೆ, ಸುಮಿತ್ ಕುಂಡು (70 ಕೆಜಿ) ಕಂಚಿನ ಪದಕ ಗೆದ್ದುಕೊಂಡರು.


Spread the love
Share:

administrator

Leave a Reply

Your email address will not be published. Required fields are marked *