Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್ಮುಂದೆ 3 ವರ್ಷಕ್ಕೊಮ್ಮೆ PUC ಟೆಸ್ಟ್ ಸಾಕು: ಹೊಸ ಖಾಸಗಿ ವಾಹನ ಸವಾರರಿಗೆ ರಿಲೀಫ್!

Spread the love

ನವದೆಹಲಿ: ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 6 ವರ್ಷಗಳವರೆಗಿನ ಹೊಸ BS-VI (ಬಿಎಸ್-6) ಖಾಸಗಿ ಕಾರು ಮತ್ತು ಬೈಕ್‌ಗಳ ಮಾಲಿನ್ಯ ನಿಯಂತ್ರಣ (Pollution Under Control -PUC) ಪ್ರಮಾಣಪತ್ರದ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಲಾಗಿದೆ. ಆದರೆ ಈ ಸೌಲಭ್ಯ ಹಳೆಯ ವಾಹನಗಳು ಅಥವಾ ವಾಣಿಜ್ಯ (Commercial Vehicle) ವಾಹನಗಳಿಗೆ ಅನ್ವಯವಾಗುವುದಿಲ್ಲ.

ಕಡಿಮೆ ಹೊಗೆ ಉಗುಳುವ ಹೊಸ ವಾಹನಗಳಿಗೆ ಪದೇ ಪದೇ ಟೆಸ್ಟ್ ಮಾಡಿಸುವ ಕಿರಿಕಿರಿ ತಪ್ಪಿಸಿ, ಹಳೆಯ ವಾಹನಗಳ ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ನಿಯಮ ಜಾರಿಗೆ ತಂದಿದೆ. ವಾಹನದ ಮಾಲಿನ್ಯ ಮಾನದಂಡ (BS), ಬಳಕೆಯ ವಿಧ (ಖಾಸಗಿ/ವಾಣಿಜ್ಯ) ಹಾಗೂ ವಾಹನ ಮೊದಲ ಬಾರಿಗೆ ನೋಂದಣಿಯಾದ (First Registration) ದಿನಾಂಕದ ಆಧಾರದ ಮೇಲೆ ಈ ಅವಧಿ ನಿರ್ಧಾರವಾಗುತ್ತದೆ.

ಯಾವ ವಾಹನಕ್ಕೆ ಎಷ್ಟು ವರ್ಷ PUC ವ್ಯಾಲಿಡಿಟಿ?
ಖಾಸಗಿ BS-VI ವಾಹನಗಳು (ಕಾರು, ಬೈಕ್):
6 ವರ್ಷದೊಳಗಿನ ವಾಹನಗಳಿಗೆ: 3 ವರ್ಷ
6 ರಿಂದ 10 ವರ್ಷದೊಳಗಿನ ವಾಹನಗಳಿಗೆ: 1 ವರ್ಷ
10 ವರ್ಷ ಮೇಲ್ಪಟ್ಟ ವಾಹನಗಳಿಗೆ: 6 ತಿಂಗಳು

ವಾಣಿಜ್ಯ BS-VI ವಾಹನಗಳು (ಟ್ಯಾಕ್ಸಿ, ಬಸ್, ಲಾರಿ):
6 ವರ್ಷದೊಳಗಿನ ವಾಹನಗಳಿಗೆ: 2 ವರ್ಷ
6 ರಿಂದ 10 ವರ್ಷದೊಳಗಿನ ವಾಹನಗಳಿಗೆ: 1 ವರ್ಷ
10 ವರ್ಷ ಮೇಲ್ಪಟ್ಟ ವಾಹನಗಳಿಗೆ: 6 ತಿಂಗಳು

ಹಳೆಯ ವಾಹನಗಳು (ಖಾಸಗಿ ಮತ್ತು ವಾಣಿಜ್ಯ):
BS-IV ವಾಹನಗಳಿಗೆ: ಪ್ರತಿ 6 ತಿಂಗಳಿಗೊಮ್ಮೆ
BS-I, BS-II ಮತ್ತು BS-III ವಾಹನಗಳಿಗೆ: ಪ್ರತಿ 3 ತಿಂಗಳಿಗೊಮ್ಮೆ

ಒಂದೇ ಮಾಡೆಲ್‌ನ ಎರಡು ಕಾರುಗಳಿದ್ದರೂ, ಅವು ಖಾಸಗಿಯೇ ಅಥವಾ ಟ್ಯಾಕ್ಸಿಯೇ ಹಾಗೂ ಯಾವಾಗ ರಿಜಿಸ್ಟರ್ ಆಗಿವೆ ಎಂಬುದರ ಮೇಲೆ PUC ಅವಧಿ ಬದಲಾಗುತ್ತದೆ.

ಹಳೆಯ PUC ಕಾರ್ಡ್ ಇದ್ದವರು ಏನು ಮಾಡಬೇಕು?
ಈಗಾಗಲೇ ನಿಮ್ಮ ಬಳಿ ಇರುವ PUC ಪ್ರಮಾಣಪತ್ರದ ಅವಧಿ ತನ್ನಿಂದ ತಾನೇ 3 ವರ್ಷಕ್ಕೆ ವಿಸ್ತರಣೆಯಾಗುವುದಿಲ್ಲ. ಹಳೆಯ ಕಾರ್ಡ್‌ನಲ್ಲಿರುವ ಮುಕ್ತಾಯದ ದಿನಾಂಕವೇ ಅಂತಿಮವಾಗಿರುತ್ತದೆ.

ಉದಾಹರಣೆಗೆ, ನಿಮ್ಮ 4 ವರ್ಷ ಹಳೆಯ BS-VI ಖಾಸಗಿ ಕಾರಿನ PUC ಮುಂದಿನ ತಿಂಗಳು ಮುಗಿಯುವುದಿದ್ದರೆ, ನೀವು ತಪ್ಪದೇ ಅದನ್ನು ನವೀಕರಿಸಬೇಕು. ಆ ನಂತರ ನಿಮಗೆ ಸಿಗುವ ಹೊಸ ಸರ್ಟಿಫಿಕೇಟ್ 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆದ್ದರಿಂದ ಹಳೆಯ ಕಾರ್ಡ್‌ನ ಅವಧಿ ತಾನಾಗಿಯೇ ಹೆಚ್ಚಾಗಿದೆ ಎಂದು ನಿರ್ಲಕ್ಷ್ಯ ವಹಿಸಬೇಡಿ.

ಅವಧಿಗೂ ಮುನ್ನ PUC ನವೀಕರಿಸಿದರೆ ಲಾಭವಿದೆಯೇ?
ನಿಮ್ಮ PUC ಅವಧಿ ಮುಗಿಯುವ 10 ದಿನಗಳ ಒಳಗಾಗಿ ನೀವು ಹೊಸದಾಗಿ ನವೀಕರಿಸಿದರೆ, ಹಳೆಯ ಕಾರ್ಡ್‌ನ ಅವಧಿ ಮುಗಿದ ದಿನಾಂಕದಿಂದಲೇ ಹೊಸ 3 ವರ್ಷದ ಅವಧಿ ಶುರುವಾಗುತ್ತದೆ. ಇದರಿಂದ ನಿಮ್ಮ ಹಳೆಯ ಕಾರ್ಡ್‌ನ ಉಳಿದ ದಿನಗಳು ವ್ಯರ್ಥವಾಗುವುದಿಲ್ಲ.ಒಂದು ವೇಳೆ ದಿನಾಂಕ ಮುಗಿದ ನಂತರ ನವೀಕರಿಸಿದರೆ, ನೀವು ನವೀಕರಿಸಿದ ದಿನದಿಂದಲೇ ಹೊಸ ಅವಧಿ ಲೆಕ್ಕಕ್ಕೆ ಬರುತ್ತದೆ.

ವ್ಯಾಲಿಡಿಟಿ ಹೆಚ್ಚಾಗಿದ್ದರೂ, ವಾಹನ ಚಲಾಯಿಸುವಾಗ ಅಧಿಕೃತ ಕೇಂದ್ರದಿಂದ ಪಡೆದ PUC ಪ್ರಮಾಣಪತ್ರವನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಪೊಲೀಸರು ಕೇಳಿದಾಗ ತೋರಿಸುವುದು ಕಡ್ಡಾಯವಾಗಿದೆ.

ಏನಿದು ಬಿಎಸ್‌ 6?
ಬಿಎಸ್-6 (ಭಾರತ್ ಸ್ಟೇಜ್ 6) ಎನ್ನುವುದು ಭಾರತ ಸರ್ಕಾರವು ವಾಹನಗಳಿಂದ ಹೊರಬರುವ ಹೊಗೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಜಾರಿಗೆ ತಂದಿರುವ ಕಟ್ಟುನಿಟ್ಟಾದ ಮಾನದಂಡವಾಗಿದೆ. ಬಿಎಸ್-6 ವಾಹನಗಳಿಗೆ ಅತಿ ಕಡಿಮೆ ಸಲ್ಫರ್ (ಗಂಧಕ) ಇರುವ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಬಳಸಲಾಗುತ್ತದೆ. ಇದು ವಾತಾವರಣಕ್ಕೆ ಸೇರುವ ಹೊಗೆಯನ್ನು ಕಡಿಮೆ ಮಾಡುತ್ತದೆ.

ವಾಹನಗಳ ಎಂಜಿನ್‌ನಿಂದ ಹೊರಬರುವ ವಿಷಕಾರಿ ಅನಿಲಗಳಾದ ನೈಟ್ರೋಜನ್ ಆಕ್ಸೈಡ್ (NOx) ಮತ್ತು ಕಾರ್ಬನ್ ಮಾನಾಕ್ಸೈಡ್ ಪ್ರಮಾಣವನ್ನು ಇದು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಈ ವಾಹನಗಳಲ್ಲಿ ಹೊಗೆಯನ್ನು ಶೋಧಿಸುವ ವಿಶೇಷ ಫಿಲ್ಟರ್‌ಗಳು (DPF) ಮತ್ತು ಎಂಜಿನ್ ದೋಷಗಳನ್ನು ತಕ್ಷಣವೇ ತೋರಿಸುವ ಸೆನ್ಸಾರ್‌ಗಳು (OBD) ಇರುತ್ತವೆ. ಭಾರತದಲ್ಲಿ ಏಪ್ರಿಲ್ 1, 2020 ರಿಂದ ಬಿಎಸ್-4 ವಾಹನಗಳ ಮಾರಾಟವನ್ನು ನಿಲ್ಲಿಸಿ, ಕೇವಲ ಬಿಎಸ್-6 ವಾಹನಗಳ ಮಾರಾಟವನ್ನು ಮಾತ್ರ ಕಡ್ಡಾಯಗೊಳಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *