ಮಾಜಿ ಕೆಎಫ್‌ಡಿಸಿ ಅಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಮಚಂದ್ರ ಬೈಕಂಪಾಡಿ ನಿಧನ

ಮೊಗವೀರ ಸಮುದಾಯದ ಪ್ರಮುಖ ಧ್ವನಿ, KFDCಯ ಮಾಜಿ ಅಧ್ಯಕ್ಷರು, ರಂಗಕರ್ಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯುತ ರಾಮಚಂದ್ರ ಬೈಕಂಪಾಡಿ ಅವರ ಅಕಾಲಿಕ ಅಗಲುವಿಕೆ ತೀವ್ರ ಬೇಸರ ತರಿಸಿದೆ.

ಮೀನುಗಾರಿಕಾ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗೆ ಸತತವಾಗಿ ಶ್ರಮಿಸಿದ ಇವರ ವಿಯೋಗದಿಂದ, ಸಮಾಜವು ಒಬ್ಬ ಸಕ್ರಿಯ ಸೇವಕನನ್ನು ಕಳೆದುಕೊಂಡಂತಾಗಿದೆ.