ಹಬ್ಬದ ಸ್ವೀಟ್ಸ್ಗೆ ಫುಡ್ ಇನ್ಸ್ಪೆಕ್ಟರ್ಸ್ ಬ್ರೇಕ್: ನೈರ್ಮಲ್ಯ ಗಾಳಿಗೆ ತೂರಿದ ಶಾಪ್ಗಳಿಗೆ ದಂಡದ ಬಿಸಿ!

ಬೆಂಗಳೂರು: ವಿಜಯದಶಮಿ ಹಬ್ಬದ ಸಿದ್ಧತೆಯ ನಡುವೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ವೀಟ್ ಅಂಗಡಿಗಳಿಗೆ ಬಿಗ್ ಶಾಕ್ ನೀಡಿದೆ.

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್ಗಳ ಮೇಲೆ ದಾಳಿ ಮುಂದುವರೆಸಿದ್ದು, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಪರಿಶೀಲಿಸಲಾಗುತ್ತಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿ, ಎಫ್ಎಸ್ಎಸ್ಎಐ (FSSAI) ಅಧಿಕಾರಿಗಳು ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 186 ವಿವಿಧ ಮಾದರಿಯ ಸ್ವೀಟ್ಸ್ ಸ್ಯಾಂಪಲ್ಗಳನ್ನ ಸಂಗ್ರಹಿಸಲಾಗಿದೆ.ಸ್ವೀಟ್ಸ್ ತಯಾರಿಕಾ ಘಟಕಗಳಲ್ಲಿ (Sweets Manufacturing Unit) ಶುಚಿತ್ವ ಕಾಪಾಡದಿರುವುದು, ಸಿಬ್ಬಂದಿಗೆ ಕಡ್ಡಾಯವಾಗಿ ಇರಬೇಕಾದ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು ಮತ್ತು ಉತ್ಪನ್ನಗಳ ಲೇಬಲಿಂಗ್ನಲ್ಲಿ ದೋಷಗಳು ದಾಳಿಯ ಸಂದರ್ಭದಲ್ಲಿ ಕಂಡುಬಂದಿವೆ.7,000 ರೂಪಾಯಿ ದಂಡ
ಇದೇ ವೇಳೆ 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್ ನೀಡುವುದರ ಜೊತೆಗೆ 2 ಉದ್ದಿಮೆಗಳಿಗೆ 7,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಇತ್ತ ಕೋಲಾರ ಜಿಲ್ಲೆಯ ಕೆಜಿಎಫ್ ನಗರದದಲ್ಲಿ ಅಧಿಕಾರಿಗಳು 2 ಸಿಹಿ ಅಂಗಡಿ ಹಾಗೂ 1 ಹೋಟೆಲ್ ಪರಿಶೀಲನೆ ನಡೆಸಿ. ಸ್ವಚ್ಚತೆ ಪಾಲಿಸದ 3 ಅಂಗಡಿಗಳಿಗೆ 12 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.